ADVERTISEMENT

ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದ ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 7:38 IST
Last Updated 8 ಏಪ್ರಿಲ್ 2021, 7:38 IST
ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಟ್ವಿಟರ್‌ ಚಿತ್ರ: @narendramodi)
ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಟ್ವಿಟರ್‌ ಚಿತ್ರ: @narendramodi)   

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದರು.

ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ.

' ನಾನು ಇಂದು ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದೆ. ಕೊರೊನಾ ವೈರಸ್‌ ಅನ್ನು ಮಣಿಸಲು ನಮ್ಮ ಮುಂದಿರುವ ಕೆಲವೇ ಆಯ್ಕೆಗಳಲ್ಲಿ ಲಸಿಕೆಯೂ ಒಂದು,' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

' ಒಂದು ವೇಳೆ ಲಸಿಕೆ ಪಡೆಯಲು ನೀವು ಅರ್ಹರಾಗಿದ್ದರೆ, ಕೂಡಲೇ ಲಸಿಕೆ ಪಡೆಯಿರಿ. ಅದಕ್ಕಾಗಿ ನೋಂದಣಿ ಮಾಡಿಕೊಳ್ಳಿ,' ಎಂದು ಅವರು ನಾಗರಿಕರಿಗೆ ಸಂದೇಶ ರವಾನಿಸಿದ್ದಾರೆ.

ಏಮ್ಸ್‌ನಲ್ಲಿ ನರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪುದುಚೇರಿಯ ಪಿ. ನಿವೇದಾ ಮತ್ತು ಪಂಜಾಬ್‌ನ ನಿಶಾ ಶರ್ಮಾ ಎಂಬುವರು ಪ್ರಧಾನಿಗೆ ಲಸಿಕೆ ನೀಡಿದರು.

'ದೇಶದ ಪ್ರಧಾನಿಗೆ ನಾನು ಕೋವ್ಯಾಕ್ಸಿನ್‌ ಲಸಿಕೆ ನೀಡಿದೆ. ಅವರು ನನ್ನೊಂದಿಗೆ ಮಾತನಾಡಿದರು. ಅವರನ್ನು ಭೇಟಿಯಾಗಿದ್ದು, ಅವರಿಗೆ ಲಸಿಕೆ ನೀಡಿದ್ದು ಮರೆಯಲಾಗದ ಕ್ಷಣ,' ಎಂದು ನಿಶಾ ಶರ್ಮಾ ಹೇಳಿದ್ದಾರೆ.

ಮಾರ್ಚ್‌ 1ರ ಸೋಮವಾರ ಪ್ರಧಾನಿ ಮೋದಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದರು. ಪುದುಚೇರಿಯ ಪಿ.ನಿವೇದಾ ಪ್ರಧಾನಿಗೆ ಭಾರತ್‌ ಬಯೋಟೆಕ್‌ನ 'ಕೊವ್ಯಾಕ್ಸಿನ್‌' ಲಸಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.