ಪದ್ಮಶ್ರೀ ಚೆರುವಯಲ್ ರಾಮನ್ ಮನೆಗೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಗಾಂಧಿ
ಚಿತ್ರ ಕೃಪೆ: iamvijayvasanth
ವಯನಾಡ್: ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕ್ ಗಾಂಧಿ ಅವರು ಕೇರಳದ ಮನಂತವಾಡಿಯಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರೈತ ಚೆರುವಯಲ್ ರಾಮನ್ ಅವರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದ್ದಾರೆ.
ವರದಿಗಳ ಪ್ರಕಾರ ರಾಮನ್ ಅವರ ಮನೆಯಲ್ಲಿ ಪ್ರಿಯಾಂಕಾ ಎರಡು ತಾಸಿಗೂ ಹೆಚ್ಚು ಕಾಲ ಸಮಯ ಕಳೆದಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಮನ್ ಅವರು ಭತ್ತ ಬೆಳೆಯುವ ರೈತ. ರಾಮನ್ ಅವರಿಗೆ ಕೃಷಿ ಬಗ್ಗೆ ಅದರಲ್ಲೂ ಭತ್ತದ ಕೃಷಿ ಕುರಿತು ಇರುವ ಜ್ಞಾನದಿಂದಾಗಿ ಅವರನ್ನು ‘ಬೀಜಗಳ ರಕ್ಷಕ’ ಎಂದೇ ಕರೆಯಲಾಗುತ್ತದೆ. ಇವರು 50ಕ್ಕೂ ಹೆಚ್ಚು ವಿಧದ ತಳಿಯ ಭತ್ತಗಳ ಬೀಜಗಳನ್ನು ಸಂರಕ್ಷಿಸಿದ್ದಾರೆ.
ರಾಮನ್ ಅವರ ಮನೆಗೆ ಭೇಟಿ ನೀಡಿದ್ದ ಪ್ರಿಯಾಂಕಾ, ಭತ್ತದ ಗದ್ದೆಗಳಲ್ಲಿ ಓಡಾಡಿ, ಸಾಂಪ್ರದಾಯಿಕ ಕೃಷಿ ವಿಧಾನಗಳ ಬಗ್ಗೆ, ವಿವಿಧ ತಳಿಯ ಭತ್ತದ ಬೀಜಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಸ್ಥಳೀಯ ಜಾನಪದ ಗೀತೆಗಳನ್ನು ಸಹ ಕೇಳಿದ್ದಾರೆ.
ಹೊರಡುವ ಮೊದಲು, ರಾಮನ್ ಅವರ ಮನೆಯಲ್ಲಿದ್ದ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಬಿಲ್ಲು ಮತ್ತು ಬಾಣಗಳ ಉಪಯೋಗಿಸಿ ಸಂಭ್ರಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.