ADVERTISEMENT

ಅಮುಲ್ ವಿಲೀನ, ಬಹು ರಾಜ್ಯ ಸಹಕಾರ ಸಂಸ್ಥೆ ರಚನೆ: ಅಮಿತ್ ಶಾ

ಪಿಟಿಐ
Published 10 ಅಕ್ಟೋಬರ್ 2022, 2:33 IST
Last Updated 10 ಅಕ್ಟೋಬರ್ 2022, 2:33 IST
ಕೇಂದ್ರ ಸಹಕಾರ ಸಚಿವ ಅಮಿತ್ ಶಾ
ಕೇಂದ್ರ ಸಹಕಾರ ಸಚಿವ ಅಮಿತ್ ಶಾ    

ಗುವಾಹಟಿ: ಅಮುಲ್ ಸಹಕಾರ ಸಂಘವನ್ನು ಇತರ ಐದು ಸಹಕಾರ ಸಂಘಗಳ ಜೊತೆ ವಿಲೀನ ಮಾಡಿ, ಬಹು ರಾಜ್ಯ ಸಹಕಾರ ಸಂಸ್ಥೆಯನ್ನು (ಎಂಎಸ್‌ಸಿಎಸ್‌) ರಚಿಸಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ವಿಲೀನ ಪ್ರಕ್ರಿಯೆ ಶುರುವಾಗಿದೆ ಎಂದು ಹೇಳಿದ್ದಾರೆ.

ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು ‘ಅಮುಲ್’ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಎಂಎಸ್‌ಸಿಎಸ್‌ ಗಳು ಉತ್ಪನ್ನಗಳ ರಫ್ತಿಗೆ ನೆರವಾಗಿ, ಲಾಭವು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಹೋಗುವಂತೆ ಮಾಡುತ್ತವೆ ಎಂದು ಶಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT