ಇಂಫಾಲ್: ಬಿಜೆಪಿ ಮುಖಂಡ ಎಂ.ಡಿ ಅಸ್ಕರ್ ಅಲಿ ಅವರ ಮನೆಗೆ ಉದ್ರಿಕ್ತರ ಗುಂಪೊಂದು ಭಾನುವಾರ ಬೆಂಕಿ ಹಚ್ಚಿದ ಬೆನ್ನಲ್ಲೇ ಲಿಲೊಂಗ್ ವಿಧಾನಸಭಾ ಕ್ಷೇತ್ರದಾದ್ಯಂತ ಸೋಮವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಅಲಿ ಅವರು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ವಿರೋಧಿಸಿ ಸುಮಾರು 7–8 ಸಾವಿರ ಜನರು ಕಲ್ಲು ಮತ್ತು ದೊಣ್ಣೆಗಳನ್ನು ಹಿಡಿದು ಅವರ ಮನೆಗೆ ನುಗ್ಗಿದರು.
ಘಟನೆ ಬಳಿಕ ಅಲಿ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿ, ಮಸೂದೆಯನ್ನು ಖಂಡಿಸುವುದಾಗಿ ಭಾನುವಾರ ರಾತ್ರಿ ಹೇಳಿದರು.
ಮಸೂದೆಯನ್ನು ವಿರೋಧಿಸಿ ಮಣಿಪುರದ ಹಲವೆಡೆ ಸಾವಿರಾರು ಜನರು ಭಾನುವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.