ADVERTISEMENT

ಮಾದಕದ್ರವ್ಯ ಪೂರೈಕೆ: ರಾಜ್ಯದ ಸಂಗೀತಗಾರರು, ನಟರ ಮೇಲೆ ನಿಗಾ

ಪಿಟಿಐ
Published 26 ಆಗಸ್ಟ್ 2020, 20:57 IST
Last Updated 26 ಆಗಸ್ಟ್ 2020, 20:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕರ್ನಾಟಕದ ಕೆಲವು ಪ್ರಮುಖ ಸಂಗೀತಗಾರರು, ನಟರಿಗೆ ಮಾದಕ ದ್ರವ್ಯ ‘ಎಂಡಿಎಂಎ’ (ಎಕ್‌ಸ್ಟಸಿ ಪಿಲ್‌ ಎಂದೂ ಕರೆಯಲಾಗುತ್ತದೆ) ಅನ್ನು ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿರುವ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯುರೋ (ಎನ್‌ಸಿಬಿ), ಇವರ ಮೇಲೆ ನಿಗಾ ಇರಿಸಿದೆ ಎಂದು ತಿಳಿಸಿದೆ.

‘ಬೆಂಗಳೂರಿನ ಕಲ್ಯಾಣನಗರದ ರಾಯಲ್ ಸೂಟ್ಸ್‌ ಅಪಾರ್ಟ್‌ಮೆಂಟ್‌ ಮೇಲೆ ಆಗಸ್ಟ್‌ 21ರಂದು ದಾಳಿ ನಡೆಸಿದಾಗ ₹ 2.20 ಕೋಟಿ ಮೌಲ್ಯದ 145 ಎಂಡಿಎಂಎ ಪಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ, ಈ ಮಾದಕದ್ರವ್ಯ ಪೂರೈಕೆ ಜಾಲದ ಸೂತ್ರಧಾರಿ ಮಹಿಳೆಗೆ ಸೇರಿದ, ದೊಡ್ಡಗುಬ್ಬಿಯಲ್ಲಿನ ಮನೆ ಮೇಲೆ ದಾಳಿ ನಡೆಸಿ 270 ಪಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎನ್‌ಸಿಬಿ ಉಪನಿರ್ದೇಶಕ ಕೆ.ಪಿ.ಎಸ್‌.ಮಲ್ಹೋತ್ರಾ ತಿಳಿಸಿದ್ದಾರೆ.

‘ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಿದಾಗ, ಪ್ರಮುಖ ಸಂಗೀತಗಾರರು, ನಟರಿಗೆ ಈ ಮಾದಕದ್ರವ್ಯ ಪೂರೈಕೆ ಮಾಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದು, ತನಿಖೆ ನಡೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.