ADVERTISEMENT

ಹಿಜಾಬ್ ಕಡ್ಡಾಯ: ಪರಿಶೀಲನೆಗೆ ಇರಾನ್ ಭರವಸೆ

ತೀವ್ರಗೊಳ್ಳುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಹೆಣಗುತ್ತಿರುವ ಸರ್ಕಾರ

ಏಜೆನ್ಸೀಸ್
Published 4 ಡಿಸೆಂಬರ್ 2022, 12:59 IST
Last Updated 4 ಡಿಸೆಂಬರ್ 2022, 12:59 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಟೆಹರಾನ್: ಇರಾನ್‌ನಲ್ಲಿ ಮಹಿಳೆಯರಿಗೆ ಹಿಜಾಬ್ ಕಡ್ಡಾಯಗೊಳಿಸಿರುವ ಕಾನೂನನ್ನು ಪರಿಶೀಲಿಸುವುದಾಗಿ ಅಲ್ಲಿನ ಸರ್ಕಾರ ಶನಿವಾರ ಹೇಳಿದೆ.

ಹಿಜಾಬ್ ಕಡ್ಡಾಯ ಕಾನೂನಿನ ಬದಲಾವಣೆಯ ಅಗತ್ಯವಿದೆಯೇ ಎಂಬುದರ ಕುರಿತು‘ಸಂಸತ್ತು ಮತ್ತು ನ್ಯಾಯಾಂಗ ವ್ಯವಸ್ಥೆ ಎರಡೂ ಒಟ್ಟಾಗಿ ಕೆಲಸ ಮಾಡುತ್ತಿವೆ’ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಜಫರ್ ಮೊಂಟಜೇರಿ ಹೇಳಿದ್ದಾರೆ.

‘ಈ ಕುರಿತ ಪರಿಶೀಲನಾ ತಂಡವು ಬುಧವಾರ ಸಂಸತ್ತಿನ ಸಂಸ್ಕೃತಿ ಆಯೋಗವನ್ನು ಭೇಟಿ ಮಾಡಿದೆ. ಒಂದು ಅಥವಾ ಎರಡು ವಾರಗಳಲ್ಲಿ ಹಿಜಾಬ್ ಕುರಿತಂತೆ ಫಲಿತಾಂಶ ಹೊರಬೀಳಲಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ಷರಿಯಾ ಆಧಾರಿತ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕುರ್ದಿಶ್ ಮೂಲದ ಯುವತಿ ಮಹ್ಸಾ ಅಮಿನಿ ಅವರು ಸೆ. 16ರಂದು ಸಾವಿಗೀಡಾಗಿದ್ದರು. ಅವರ ಸಾವಿನ ಬಳಿಕ ಹಿಜಾಬ್ ವಿರೋಧಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಭಟನಕಾರರು ತಾವು ಧರಿಸಿದ್ದ ಹಿಜಾಬ್‌ ಅನ್ನು ಸುಟ್ಟುಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.