ADVERTISEMENT

ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಪತಿ ಶ್ರೀನಿವಾಸನ್ ನಿಧನ

ಪಿಟಿಐ
Published 30 ಜನವರಿ 2026, 5:04 IST
Last Updated 30 ಜನವರಿ 2026, 5:04 IST
   

ಕೋಯಿಕ್ಕೋಡ್(ಕೇರಳ): ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ(ಐಒಎ) ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ಬೆಳಗಿನ ಜಾವ ಕೇರಳದ ಕೋಯಿಕ್ಕೋಡ್‌ನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಬೆಳಗಿನ ಜಾವ ಮನೆಯಲ್ಲಿ ಕುಸಿದುಬಿದ್ದ ಶ್ರೀನಿವಾಸನ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಾಯಿತು. ಆದರೂ ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪಿ.ಟಿ. ಉಷಾ ಅವರಿಗೆ ಕರೆ ಮಾಡಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂತಾಪ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ನಿವೃತ್ತ ನೌಕರರಾದ ಶ್ರೀನಿವಾಸನ್ ಅವರು, ಉಷಾ ಅವರ ಪ್ರಸಿದ್ಧ ಕ್ರೀಡಾ ಮತ್ತು ರಾಜಕೀಯ ಜೀವನದುದ್ದಕ್ಕೂ ಜೊತೆಗಿದ್ದರು ಎಂದು ವರದಿ ತಿಳಿಸಿದೆ.

ಶ್ರೀನಿವಾಸನ್ ಅವರನ್ನು ಉಷಾ ಅವರ ವೃತ್ತಿಪರ ಮೈಲಿಗಲ್ಲುಗಳ ಹಿಂದಿನ ಪ್ರೇರಕ ಶಕ್ತಿ ಮತ್ತು ಆಧಾರ ಸ್ತಂಭ ಎಂದು ಪರಿಗಣಿಸಲಾಗಿತ್ತು.

ದಂಪತಿಗೆ ಉಜ್ವಲ್ ಎಂಬ ಮಗನಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.