ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಿದರೆ ಕ್ರಮ: ನೋಯ್ಡಾ ಪೊಲೀಸ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 18:42 IST
Last Updated 25 ಡಿಸೆಂಬರ್ 2018, 18:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೋಯ್ಡಾ: ಬಹುರಾಷ್ಟ್ರೀಯ ಕಂಪನಿಯಉದ್ಯೋಗಿಗಳು ಸಾರ್ವಜನಿಕ ಸ್ಥಳ, ಪಾರ್ಕ್‌ಗಳಲ್ಲಿನಮಾಜ್ ಮಾಡಿದರೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ.ಇಲ್ಲಿನ ಸೆಕ್ಟರ್ 58ರಲ್ಲಿರುವ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಪೊಲೀಸರು ಈ ಆದೇಶ ನೀಡಿದ್ದು, ಕಂಪನಿಯ ನೌಕರರು ಶುಕ್ರವಾರ ನಮಾಜ್‍ಗೆ ಸಾರ್ವಜನಿಕ ಪಾರ್ಕ್‌ಗಳನ್ನು ಬಳಸುವಂತಿಲ್ಲ ಎಂದು ಹೇಳಿದೆ.

ಈ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಕಂಪನಿಗಳು ಹಿರಿಯ ಪೊಲೀಸ್ ಅಧಿಕಾರಿಯವರ ಜತೆಗೆ ಮಾತುಕತೆ ನಡೆಸಲು ಮುಂದಾಗಿವೆ.ಅದೇ ವೇಳೆ ಪೊಲೀಸರ ಈ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಕಂಪನಿಗಳು ಚಿಂತನೆ ನಡೆಸಿವೆ ಎಂದು ಮೂಲಗಳು ಹೇಳಿವೆ.

ಪೋಲೀಸರ ಆದೇಶದ ಬಗ್ಗೆ ನೋಯ್ಡಾದಲ್ಲಿ ಭಾರಿ ಚರ್ಚೆ ಶುರುವಾಗಿದ್ದು, ತಾವು ಯಾವುದೇ ಧರ್ಮದ ಪರ ಅಥವಾ ವಿರೋಧ ಮಾಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಕೆಲವೊಂದು ಹಿಂದೂ ಸಂಘಟನೆಗಳು ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ್ದು, ತೆರೆದ ಸ್ಥಳಗಳಲ್ಲಿ ನಮಾಜ್ ಮಾಡುವುದರಿಂದ ಆ ಪ್ರದೇಶದ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ದೂರು ನೀಡಿದ್ದರು ಎಂದು ಮೂಲಗಳು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.ಇದೀಗಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿನ ಕಂಪನಿಗಳಿಗೆ ಈ ರೀತಿಯ ನೋಟಿಸ್ ನೀಡಿವೆ.

ಪಾರ್ಕ್‌ಗಳಲ್ಲಿ ಯಾರೊಬ್ಬರಿಗೂ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವುದಿಲ್ಲ ಎಂದು ಕಳೆದ ವಾರ ಎಚ್‍ಸಿಎಲ್ ಸೇರಿದಂತೆ 12 ಬಹುರಾಷ್ಟ್ರೀಯ ಕಂಪನಿಗಳಿಗೆ ನೋಟಿಸ್ ನೀಡಲಾಗಿತ್ತು.

‘ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಕಂಪನಿಯ ಮುಸ್ಲಿಂ ಉದ್ಯೋಗಿಗಳು ಉದ್ಯಾನದಲ್ಲಿ ಸೇರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ನೊಯಿಡಾ ಪ್ರಾಧಿಕಾರದ ಉದ್ಯಾನಗಳಲ್ಲಿ ನಮಾಜ್‌ ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆ ನಡೆಸಲು ಸರ್ಕಾರ ಪರವಾನಗಿ ನೀಡಿಲ್ಲ’ ಎಂದು ನೊಯಿಡಾ ವಲಯದ ‘58’ನೇ ಪೊಲೀಸ್‌ ಠಾಣೆ ವತಿಯಿಂದ ಕಂಪನಿಗಳಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಒಂದು ವೇಳೆ, ನಮಾಜ್‌ ಸಲ್ಲಿಸಲು ಉದ್ಯಾನಕ್ಕೆ ತೆರಳಿದರೆ ಉದ್ಯೋಗಿಗಳಿಗೆ ಮಾಹಿತಿ ನೀಡಿಲ್ಲ ಎಂದು ಭಾವಿಸಿಕೊಳ್ಳಲಾಗುವುದು ಮತ್ತು ಕಂಪನಿಯನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ‘ಉದ್ಯಾನದಲ್ಲಿ ನಮಾಜ್‌ ಸಲ್ಲಿಸಲು ಅವಕಾಶ ನೀಡದಂತೆ ಹಲವರು ಮನವಿ ಸಲ್ಲಿಸಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ. ಇದು ಕೇವಲ ನಮಾಜ್‌ಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಧರ್ಮದವರಿಗೂ ಇದು ಅನ್ವಯಿಸುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.