ADVERTISEMENT

ಪುಲ್ವಾಮ ದಾಳಿ: ಉಗ್ರರ ಕೃತ್ಯಕ್ಕೆ ಸಂಭ್ರಮಾಚರಣೆ, ಪಾಕಿಸ್ತಾನ ಪರ ಘೋಷಣೆ

ತಲೆಖಾನ್‌ ಗ್ರಾಮದಲ್ಲಿ ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 11:40 IST
Last Updated 16 ಫೆಬ್ರುವರಿ 2019, 11:40 IST
ಉಗ್ರರು ದಾಳಿ ಮಾಡಿದ ಸ್ಥಳ
ಉಗ್ರರು ದಾಳಿ ಮಾಡಿದ ಸ್ಥಳ   

ರಾಯಚೂರು: ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ವಾಹನಗಳ ಮೇಲೆ ಉಗ್ರರು ದಾಳಿ ಸಂಘಟಿಸಿದಬಳಿಕ, ಜಿಲ್ಲೆಯ ಮಸ್ಕಿ ತಾಲ್ಲೂಕು ತಲೇಖಾನ್‌ ಗ್ರಾಮದಲ್ಲಿ ಒಂದು ಸಮಾಜದ ಕಿಡಿಗೇಡಿಗಳ ಗುಂಪುಬಣ್ಣ ಎರಚಿಕೊಂಡುಸಂಭ್ರಮಾಚರಣೆ ಮಾಡಿದೆಎನ್ನಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದೆ. ಸುದ್ದಿ ತಿಳಿದು ಡಿವೈಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸರು ಶನಿವಾರ ಗ್ರಾಮಕ್ಕೆ ತೆರಳಿ ಕಿಡಿಕೇಡಿ ಯುವಕರಿಗಾಗಿ ಶೋಧ ನಡೆಸಿದ್ದಾರೆ. ಇನ್ನೂ ಪತ್ತೆಯಾಗಿಲ್ಲ.

ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿರುವ ಮಸೀದಿಯೊಂದನ್ನು ಧ್ವಂಸಗೊಳಿಸಲು ಯತ್ನಿಸಿದ ಯುವಕರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಮಾಡಿ ಪ್ರಹಾರ ಮಾಡಬೇಕಾಯಿತು. ಗ್ರಾಮದಲ್ಲಿ ಸದ್ಯಕ್ಕೆ ಬಿಗುವಿನವಾತಾವರಣ ನಿರ್ಮಾಣವಾಗಿದೆ.

ADVERTISEMENT
ತಲೆಖಾನ್‌ ಗ್ರಾಮದಲ್ಲಿ ಬಿಗುವಿನ ವಾತಾವರಣ

ಪಾಕಿಸ್ತಾನ ಪರ ಘೋಷಣೆ

ಹಾವೇರಿ:ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ಹುತಾತ್ಮ ಯೋಧರಿಗೆ ಶುಕ್ರವಾರ ರಾತ್ರಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಸ್ಥಳೀಯ ಮಹ್ಮದ್ ಅಲಿ(45) ಎಂಬಾತನನ್ನು ಬಂಧಿಸಲಾಗಿದೆ.

ರಾತ್ರಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಲಿಯನ್ನು ಥಳಿಸಿದ್ದ ಸ್ಥಳೀಯರು, ಪೊಲೀಸರ ವಶಕ್ಕೆ ನೀಡಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.