ಪೋಶೆ ಕಾರು ಅಪಘಾತ
ಪಿಟಿಐ ಚಿತ್ರ
ಸತಾರ: ಪುಣೆ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ಸಂಬಂಧಿಕರೊಬ್ಬರಿಗೆ ಸೇರಿದ ರೆಸಾರ್ಟ್‌ನ ಅಕ್ರಮ ಭಾಗವನ್ನು ಸತಾರ ಜಿಲ್ಲಾಡಳಿತವು ಶನಿವಾರ ಧ್ವಂಸಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾಬಲೇಶ್ವರದ ಮಾಲ್ಕಂ ಪೇಟ್ ಪ್ರದೇಶದಲ್ಲಿರುವ ಬಾಲಕನ ಕುಟುಂಬಸ್ಥರು ಮಾಲೀಕರಾಗಿರುವ ಎಂಪಿಜಿ ಕ್ಲಬ್ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರೆಸಾರ್ಟ್ ಅಕ್ರಮವಾಗಿದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸತಾರ ಜಿಲ್ಲಾಧಿಕಾರಿ ಜಿತೇಂದ್ರ ದುಡಿ ಅವರಿಗೆ ನಿರ್ದೇಶಿಸಿದ ಕೆಲವೇ ದಿನಗಳ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕಳೆದ ವಾರ ರೆಸಾರ್ಟ್‌ಗೆ ಜಿಲ್ಲಾಡಳಿತ ಬೀಗಮುದ್ರೆ ಹಾಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 19ರಂದು ಪುಣೆಯ ಕಲ್ಯಾಣಿ ಪ್ರದೇಶದಲ್ಲಿ ಬಾಲಕ ಚಲಾಯಿಸುತ್ತಿದ್ದ ಐಷಾರಾಮಿ ಪೋಶೆ ಕಾರು ಗುದ್ದಿ ಮಧ್ಯಪ್ರದೇಶ ಮೂಲದ ಇಬ್ಬರು ಟೆಕ್ಕಿಗಳು ಸಾವಿಗೀಡಾಗಿದ್ದರು. ಈ ವೇಳೆ ಬಾಲಕ ಪಾನಮತ್ತನಾಗಿದ್ದ. ಈ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.