ADVERTISEMENT

ಪಂಜಾಬ್‌ನಲ್ಲಿ ಮುಂದಿನ 2 ವಾರಗಳವರೆಗೆ ಲಾಕ್‍ಡೌನ್ ವಿಸ್ತರಣೆ, ಕರ್ಫ್ಯೂ ಸಡಿಲಿಕೆ

ಏಜೆನ್ಸೀಸ್
Published 29 ಏಪ್ರಿಲ್ 2020, 11:48 IST
Last Updated 29 ಏಪ್ರಿಲ್ 2020, 11:48 IST
 ಅಮೃತಸರದಲ್ಲಿ  ದೇಹದ ಉಷ್ಣತೆ ತಪಾಸಣೆ ಮಾಡುತ್ತಿರುವುದು
ಅಮೃತಸರದಲ್ಲಿ ದೇಹದ ಉಷ್ಣತೆ ತಪಾಸಣೆ ಮಾಡುತ್ತಿರುವುದು   

ಚಂಡೀಗಡ: ಕೊರೊನಾವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಕರ್ಫ್ಯೂ ಹೇರಿದ್ದ ಪಂಜಾಬ್‌ನಲ್ಲಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ.

ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಕಾರ್ಖಾನೆಗಳ ಕೆಲಸ ಆರಂಭಿಸಲು ಸಹಾಯವಾಗುವಂತೆ4 ಗಂಟೆಗಳ ಕಾಲ ಕರ್ಫ್ಯೂಸಡಿಲಿಕೆ ಮಾಡಲಾಗಿದೆ ಎಂದಿದ್ದಾರೆ.

ಅದೇ ವೇಳೆ ಲಾಕ್‌ಡೌನ್ ಮತ್ತು ಕರ್ಫ್ಯೂ ಅವಧಿಯನ್ನು ಮುಂದಿನ ಎರಡು ವಾರಗಳ ವರೆಗೆ ವಿಸ್ತರಿಸಲಾಗಿದೆ. ಮುಂದಿನ ಬೆಳವಣಿಗೆಗಳ ಆಧಾರದ ಮೇಲೆ ಮುಂದಿನ ಸಡಿಲಿಕೆ ಘೋಷಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.