ADVERTISEMENT

ಪಂಜಾಬ್‌: ವಿಶ್ವಾಸ ಮತ ಗೆದ್ದ ಮುಖ್ಯಮಂತ್ರಿ ಭಗವಂತ್ ಮಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2022, 14:21 IST
Last Updated 3 ಅಕ್ಟೋಬರ್ 2022, 14:21 IST
ಭಗವಂತ್ ಮಾನ್
ಭಗವಂತ್ ಮಾನ್   

ಚಂಡಿಗಢ: ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರ ಸೋಮವಾರಪಂಜಾಬ್‌ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದೆ.

ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯ ನಂತರ ನಡೆದ ವಿಶ್ವಾಸ ಮತಯಾಚನೆಯಲ್ಲಿ ಎಎಪಿ ಸರ್ಕಾರ ಗೆಲುವು ಕಂಡಿತ್ತು. ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು ಸರ್ಕಾರದ ಬೆಂಬಲಕ್ಕೆ ನಿಂತ ಶಾಸಕರಿಗೆ ಕೈ ಎತ್ತುವಂತೆ ಹೇಳಿದರು. ನಂತರ ಬೆಂಬಲವನ್ನು ಎಣಿಕೆ ಮಾಡಿದ ಬಳಿಕ ಸ್ಪೀಕರ್‌ ಅವರು ಸರ್ಕಾರವಿಶ್ವಾಸ ಮತ ಗೆದ್ದಿದೆ ಎಂದು ಹೇಳಿದರು.

ಸದನದಲ್ಲಿ ವಿಶ್ವಾಸ ಮತ ಚರ್ಚೆ ಆರಂಭವಾದ ಕೂಡಲೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ADVERTISEMENT

117 ಸದಸ್ಯರ ಪಂಜಾಬ್ ವಿಧಾನಸಭೆಯಲ್ಲಿ 93 ಶಾಸಕರು ಸರ್ಕಾರವನ್ನು ಬೆಂಬಲಿಸಿದರು. ಇವರಲ್ಲಿ ಎಎಪಿಯ 91 ಶಾಸಕರು ಹಾಗೂ ಬಿಎಸ್‌ಪಿ, ಎಸ್‌ಎಡಿಯ ತಲಾ ಒಬ್ಬರು ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದರು.

ಪಂಜಾಬ್‌ ವಿಧಾನಸಭೆಯಲ್ಲಿ ಎಎಪಿ 91, ಕಾಂಗ್ರೆಸ್ 18, ಎಸ್‌ಎಡಿ 3, ಬಿಜೆಪಿ 2, ಬಿಎಸ್‌ಪಿ 1 ಮತ್ತು ಒಬ್ಬ ಪಕ್ಷೇತರ ಶಾಸಕ ಇದ್ದಾರೆ.

ಪಂಜಾಬ್‌ನಲ್ಲಿ ಆಪರೇಷನ್ ಕಮಲವನ್ನು ನಾವು ಸೋಲಿಸಿದ್ದೇವೆ ಎಂದುಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ಬಿಜೆಪಿ ಪಕ್ಷ ತಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿತ್ತು ಎಂದು ಆರೋಪ ಮಾಡಿದರು.

ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ಎಎಪಿಯ 10 ಶಾಸಕರನ್ನು ಸಂಪರ್ಕಿಸಿತ್ತು, ಪ್ರತಿಯೊಬ್ಬರಿಗೂ ತಲಾ ₹ 25 ಕೋಟಿ ನೀಡುವುದಾಗಿ ಹೇಳಿತ್ತು ಎಂದು ಎಎಪಿ ಪಕ್ಷ ಆರೋಪ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.