ADVERTISEMENT

ಪಂಜಾಬ್: ವಿಶ್ವಾಸ ಮತ ನಿರ್ಣಯ ಮಂಡಿಸಿದ ಸಿ.ಎಂ ಭಗವಂತ್ ಮಾನ್

ವಿಶೇಷ ಅಧಿವೇಶನ: ಕಾಂಗ್ರೆಸ್, ಅಕಾಲಿದಳ ವಿರೋಧ

ಪಿಟಿಐ
Published 27 ಸೆಪ್ಟೆಂಬರ್ 2022, 14:05 IST
Last Updated 27 ಸೆಪ್ಟೆಂಬರ್ 2022, 14:05 IST
ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿದರು –ಪಿಟಿಐ ಚಿತ್ರ 
ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿದರು –ಪಿಟಿಐ ಚಿತ್ರ    

ಚಂಡೀಗಢ: ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ಸದನವನ್ನು ಕರೆಯಲು ಒಪ್ಪಿಗೆ ನೀಡಿದ ಎರಡು ದಿನಗಳ ಬಳಿಕ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಶ್ವಾಸಮತಕ್ಕೆ ನಿರ್ಣಯ ಮಂಡಿಸಿದರು.

ಸ್ಪೀಕರ್ ಕುಲತಾರ್ ಸಿಂಗ್ ಸಂಧ್ವಾನ್ ಅವರು ವಿಶ್ವಾಸಮತ ಮಂಡನೆಗೆ ಒಪ್ಪಿಗೆ ನೀಡಿದ ಬಳಿಕ ಬಿಜೆಪಿ ಶಾಸಕರಾದ ಅಶ್ವನಿ ಶರ್ಮಾ, ಜಂಗಿ ಲಾಲ್ ಮಹಾಜನ್ ಅವರು ಸದನದಿಂದ ಹೊರನಡೆದರು.

ವಿಶ್ವಾಸ ಮತದ ನಿರ್ಣಯದ ಕುರಿತು ನಡೆದ ಚರ್ಚೆಗೆ ಅಕಾಲಿದಳ ಮತ್ತು ಕಾಂಗ್ರೆಸ್ ಶಾಸಕರು ಪದೇಪದೇ ಅಡ್ಡಿಪಡಿಸಿದರು. ಈ ವೇಳೆ ಮಾತನಾಡಿದಭಗವಂತ್ ಅವರು,ಬಿಜೆಪಿಯ ‘ಆಪರೇಷನ್ ಕಮಲ’ವನ್ನು ಕಾಂಗ್ರೆಸ್ ಪಕ್ಷವು ಬೆಂಬಲಿಸುತ್ತಿದೆ. ಹಾಗಾಗಿಯೇ, ಆ ಪಕ್ಷದ ಶಾಸಕರು ಸದನದಲ್ಲಿ ಚರ್ಚಿಸುವುದನ್ನು ಬಿಟ್ಟು ಹೊರ ನಡೆದರು ಎಂದು ಆರೋಪಿಸಿದರು.

ADVERTISEMENT

ಮಾನ್ ಮತ್ತು ಸಚಿವ ಅಮನ್ ಅರೋರಾ ಅವರು ಮಾತನಾಡಿದ ನಂತರ ಸ್ಪೀಕರ್ ಅವರು, ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯನ್ನು ಗುರುವಾರಕ್ಕೆ ಮುಂದೂಡಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ಕನಿಷ್ಠ 10 ಶಾಸಕರನ್ನು ‘ಆಪರೇಷನ್ ಕಮಲ’ದ ಅಡಿಯಲ್ಲಿ ತಲಾ ₹ 25 ಕೋಟಿ ಆಮಿಷ ಒಡ್ಡಿ ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂದು ಎಎಪಿ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಗವಂತ್ ಮಾನ್ ಅವರು ಸೆ. 22ರಂದು ವಿಶೇಷ ಅಧಿವೇಶನವನ್ನು ಕರೆಯಲು ಕೋರಿದ್ದರು. ಆದರೆ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.