ADVERTISEMENT

ಅತ್ಯಾಚಾರ ಪ್ರಕರಣ: ಕ್ರೈಸ್ತ ಪಾದ್ರಿ ಬಜೀಂದರ್ ಸಿಂಗ್‌ಗೆ ಜೀವಾವಧಿ ಶಿಕ್ಷೆ

ಪಿಟಿಐ
Published 1 ಏಪ್ರಿಲ್ 2025, 7:12 IST
Last Updated 1 ಏಪ್ರಿಲ್ 2025, 7:12 IST
<div class="paragraphs"><p>ಬಜೀಂದರ್ ಸಿಂಗ್‌</p></div>

ಬಜೀಂದರ್ ಸಿಂಗ್‌

   

ಚಂಡೀಗಢ: 2018ರ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ಪಾದ್ರಿ ಬಜೀಂದರ್ ಸಿಂಗ್‌ಗೆ ಪಂಜಾಬ್‌ನ ಮೊಹಾಲಿ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

‘ಯೇಸು ಯೇಸು ಪಾದ್ರಿ’ ಎಂದು ಹೆಸರಾಗಿದ್ದ ಬಜೀಂದರ್‌ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಮಾರ್ಚ್ 28ರಂದು ಆದೇಶ ನೀಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಕ್ರಾಂತ್‌ ಕುಮಾರ್‌ ಅವರು ಶಿಕ್ಷೆಯ ಪ್ರಮಾಣ ಮಂಗಳವಾರ ಪ್ರಕಟಿಸಿದ್ದಾರೆ.

ADVERTISEMENT

ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಬಜೀಂದರ್‌ ವಿರುದ್ಧ 2018ರಲ್ಲಿ ಪ್ರಕರಣ ದಾಖಲಾಗಿತ್ತು.

ತೀರ್ಪು ಪ್ರಕಟವಾಗುವ ಮುನ್ನ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.