ADVERTISEMENT

ಅಂತರರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಬಂಧನ

ಪಿಟಿಐ
Published 10 ಮಾರ್ಚ್ 2025, 16:11 IST
Last Updated 10 ಮಾರ್ಚ್ 2025, 16:11 IST
ಅಂತರರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಶೆಹನಾಜ್‌ ಸಿಂಗ್‌ನನ್ನು ಬಂಧಿಸಿ ಕರೆದೊಯ್ಯುತ್ತಿರುವ ಪಂಜಾಬ್‌ನ ತರನ್‌ ತಾರನ್‌ ಜಿಲ್ಲಾ ಪೊಲೀಸರು – ಪಿಟಿಐ ಚಿತ್ರ 
ಅಂತರರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಶೆಹನಾಜ್‌ ಸಿಂಗ್‌ನನ್ನು ಬಂಧಿಸಿ ಕರೆದೊಯ್ಯುತ್ತಿರುವ ಪಂಜಾಬ್‌ನ ತರನ್‌ ತಾರನ್‌ ಜಿಲ್ಲಾ ಪೊಲೀಸರು – ಪಿಟಿಐ ಚಿತ್ರ    

ಚಂಡೀಗಢ: ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿ ಹಾಗೂ ಅಮೆರಿಕದ ಎಫ್‌ಬಿಐಗೆ (ಫೆಡರಲ್‌ ತನಿಖಾ ಸಂಸ್ಥೆ) ಬೇಕಾಗಿದ್ದ ಡ್ರಗ್‌ ಪೆಡ್ಲರ್‌ನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ.  

‘ಕೊಲಂಬಿಯಾ, ಅಮೆರಿಕ ಹಾಗೂ ಕೆನಡಾಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಡ್ರಗ್‌ ಪೆಡ್ಲರ್‌, ಭಾರತ ಮೂಲದ ಶೆಹನಾಜ್‌ ಸಿಂಗ್‌ ಅಲಿಯಾಸ್‌ ಶಾನ್‌ ಭಿಂದರ್‌ನನ್ನು ತರನ್ ತಾರನ್‌ ಜಿಲ್ಲೆಯ ಪೊಲೀಸರು ಲೂಧಿಯಾನದಲ್ಲಿ ಬಂಧಿಸಿದ್ದಾರೆ’ ಎಂದು ಪೊಲೀಸ್ ಮಹಾನಿರ್ದೇಶಕರಾದ ಗೌರವ್‌ ಯಾದವ್‌ ಅವರು ‘ಎಕ್ಸ್‌’ ಖಾತೆಯಲ್ಲಿ ತಿಳಿಸಿದ್ದಾರೆ. 

ಅಮೆರಿಕದಲ್ಲಿ ಬೃಹತ್ ಪ್ರಮಾಣದ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ, ಶೆಹನಾಜ್‌ನಿಗಾಗಿ ಹುಡುಕಾಟ ನಡೆಸುತ್ತಿತ್ತು. 

ADVERTISEMENT

ಫೆ.26ರಂದು ಅಮೆರಿಕದಲ್ಲಿ 391 ಕೆ.ಜಿ ಮೆಥಂಫೆಟಮೀನ್‌, 109 ಕೆ.ಜಿ ಕೋಕೇನ್‌ ಹಾಗೂ ನಾಲ್ಕು ಅತ್ಯಾಧುನಿಕ ಆಯುಧಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಪ್ರಕರಣದಲ್ಲಿ ಶೆಹನಾಜ್‌ನ 6 ಸಹಚರರನ್ನು ಬಂಧಿಸಿದ್ದಾರೆ.

ಘಟನೆ ಬಳಿಕ ಭಾರತಕ್ಕೆ ಪರಾರಿಯಾಗಿದ್ದ ಶೆಹನಾಜ್‌ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಶೆಹನಾಜ್‌ 2024ರಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆಯೂ ಆತ ಪೊಲೀಸರಿಗೆ ಬೇಕಾಗಿದ್ದ ಎಂದು ಗೌರವ್‌ ಮಾಹಿತಿ ನೀಡಿದ್ದಾರೆ. 

ಶೆಹನಾಜ್‌ ಕೊಲಂಬಿಯಾದಿಂದ ಪ್ರತಿ ವಾರ 600 ಕೆ.ಜಿಯಷ್ಟು ಮಾದಕವಸ್ತುವನ್ನು ಬೇರೆ ದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.