ADVERTISEMENT

ಮೊಗಾ ಕ್ಷೇತ್ರ: ಸೋನು ಸೂದ್ ಕಾರು ಜಪ್ತಿ

ಪಿಟಿಐ
Published 20 ಫೆಬ್ರುವರಿ 2022, 20:52 IST
Last Updated 20 ಫೆಬ್ರುವರಿ 2022, 20:52 IST
ಸೋನು ಸೂದ್
ಸೋನು ಸೂದ್   

ಚಂಡೀಗಡ: ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂಬ ದೂರುಗಳು ಬಂದ ಕಾರಣ ನಟ ಸೂನು ಸೂದ್ ಅವರು ಮೊಗಾ ಕ್ಷೇತ್ರದ ಮತಗಟ್ಟೆಗೆ ಹೋಗಲು ಚುನಾವಣಾ ಆಯೋಗವು ನಿರ್ಬಂಧ ಹೇರಿದೆ. ಆದರೆ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಆರೋಪವನ್ನು ಸೋನು ಸೂದ್ ಅಲ್ಲಗಳೆದಿದ್ದಾರೆ.

ಮೊಗಾ ಕ್ಷೇತ್ರದಿಂದ ಸೂದ್ ಅವರ ತಂಗಿ ಮಾಳವಿಕಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಸೂದ್ ಅವರ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರ ಮನೆಯ ಸುತ್ತ ಕಣ್ಗಾವಲು ಹಾಕಿದ್ದಾರೆ.

ADVERTISEMENT

ಕೆಲವು ಅಭ್ಯರ್ಥಿಗಳು ಮತದಾರರನ್ನು ಖರೀದಿಸುತ್ತಿದ್ದಾರೆ ಎಂದು ಸೂದ್ ಆರೋಪಿಸಿದ್ದರು. ‘ಇತರ ಅಭ್ಯರ್ಥಿಗಳು ಮೊಗಾ ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗವು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಸೂದ್‌ ಟ್ವೀಟ್‌ ಮಾಡಿದ್ದಾರೆ.

‘ವದಂತಿಗಳು ಮತ್ತು ಸುಳ್ಳು ಸುದ್ದಿಗಳ ಬಗ್ಗೆ ನಾವು ಅತ್ಯಂತ ಎಚ್ಚರದಲ್ಲಿ ಇರಬೇಕು. ನಮ್ಮ ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆ ತರಲು ಸಾಧ್ಯವಿರುವ ಸರಿಯಾದ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ರತಿಯೊಂದು ಮತವೂ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಅದು ನಮ್ಮ ದೇಶದ ಅಭಿವೃದ್ಧಿಗೆ ಅತ್ಯಂತ ಮುಖ್ಯ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.