ADVERTISEMENT

ಪಂಜಾಬ್ ಗ್ರಾಮದ ಮನೆಯ ಓರ್ವ ಸದಸ್ಯ ದೆಹಲಿಗೆ; ಪ್ರತಿಭಟನೆಗೆ ತೆರಳದಿದ್ದಲ್ಲಿ ದಂಡ

ಏಜೆನ್ಸೀಸ್
Published 30 ಜನವರಿ 2021, 10:22 IST
Last Updated 30 ಜನವರಿ 2021, 10:22 IST
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ   

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕುಟುಂಬದ ಕನಿಷ್ಠ ಓರ್ವ ಸದಸ್ಯರಾದರೂ ಭಾಗವಹಿಸಬೇಕು ಎಂದು ಪಂಜಾಬ್‌ನ ಗ್ರಾಮವೊಂದು ನಿರ್ಧರಿಸಿದೆ.

ಇದನ್ನು ಉಲ್ಲಂಘಿಸಿ ಪ್ರತಿಭಟನೆಗೆ ತೆರಳದವರ ವಿರುದ್ಧ ದಂಡ ಹೇರಲು ನಿರ್ಧರಿಸಲಾಗಿದೆ. ಹಾಗೊಂದು ವೇಳೆ ದಂಡವನ್ನು ಪಾವತಿಸಲು ತಯಾರಾಗದಿದ್ದಲ್ಲಿ ಕುಟುಂಬವನ್ನು ಬಹಿಷ್ಕರಿಸಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಧರಿಸಲಾಗಿದೆ.

ಪಂಜಾಬ್‌ನ ಬತಿಂಡ ಗ್ರಾಮದಲ್ಲಿ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸರಪಂಚ್ ಮಂಜಿತ್ ಕೌರ್, ಪ್ರತಿಭಟನೆಗೆ ಹೋಗದವರ ವಿರುದ್ಧ 1500 ರೂ.ಗಳ ದಂಡ ವಿಧಿಸಲಾಗುವುದು. ದಂಡ ಪಾವತಿಸದಿದ್ದರೆ ಬಹಿಷ್ಕಾರ ಹಾಕಲಾಗುವುದು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿದರು.

ಏತನ್ಮಧ್ಯೆ, ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ, ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಹಾಪಂಚಾಯಿತಿ ಆಯೋಜಿಸಿ ಬಲ ಪ್ರದರ್ಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.