ADVERTISEMENT

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕಾಂಗ್ರೆಸ್ ಸೇರ್ಪಡೆ

ಪಿಟಿಐ
Published 3 ಡಿಸೆಂಬರ್ 2021, 11:33 IST
Last Updated 3 ಡಿಸೆಂಬರ್ 2021, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಮೂಸೆವಾಲಾ ಅವರನ್ನು ಯುವಜನತೆಯ ನೇತಾರ ಮತ್ತು ಅಂತರಾಷ್ಟ್ರೀಯ ವ್ಯಕ್ತಿತ್ವದವರು ಎಂದು ಬಣ್ಣಿಸಿರುವ ಚನ್ನಿ, ‘ಸಿಧು ಮೂಸೆವಾಲಾ ನಮ್ಮ ಕುಟುಂಬವನ್ನು ಸೇರುತ್ತಿದ್ದಾರೆ. ನಾನು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ‘ ಎಂದು ತಿಳಿಸಿದರು.

ಮೂಸೆವಾಲಾ ಅವರ ಮೂಲ ಹೆಸರು ಶುಭದೀಪ್ ಸಿಂಗ್ ಸಿಧು ಎಂದಾಗಿದ್ದು, ಅವರು ರಾಜ್ಯದ ಮನ್ಸಾ ಜಿಲ್ಲೆಯ ಮೂಸಾ ಗ್ರಾಮದವರಾಗಿದ್ದಾರೆ. ಅವರು ಹಿಂಸೆಯನ್ನು ಮತ್ತು ಗನ್‌ ಸಂಸ್ಕೃತಿಯನ್ನು ತನ್ನ ಹಾಡಿನಲ್ಲಿ ಉತ್ತೇಜಿಸಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.