ADVERTISEMENT

ರಾಜಸ್ಥಾನ: ಪುಷ್ಕರ್ ಜಾನುವಾರು ಮೇಳದಲ್ಲಿ ಕೋಟಿ ಬೆಲೆಬಾಳುವ ಕುದುರೆ, ಎಮ್ಮೆ

ಪಿಟಿಐ
Published 28 ಅಕ್ಟೋಬರ್ 2025, 13:44 IST
Last Updated 28 ಅಕ್ಟೋಬರ್ 2025, 13:44 IST
<div class="paragraphs"><p>ಜಾನುವಾರು ಮೇಳಕ್ಕೆ ಕರೆತಂದ ಕುದುರೆ</p></div>

ಜಾನುವಾರು ಮೇಳಕ್ಕೆ ಕರೆತಂದ ಕುದುರೆ

   

ಪಿಟಿಐ ಚಿತ್ರ

ಪುಷ್ಕರ್: ರಾಜಸ್ಥಾನದ ಪುಷ್ಕರ್‌ ನಗರದಲ್ಲಿ ಇದೇ 30ರಿಂದ ಆರಂಭವಾಗಲಿರುವ ‘ಪುಷ್ಕರ್‌ ಜಾನುವಾರು ಮೇಳ’ದಲ್ಲಿ ಈ ಬಾರಿ ₹15 ಕೋಟಿಯ ಕುದುರೆ, ₹23 ಕೋಟಿಯ ಎಮ್ಮೆ ಮತ್ತು 16 ಇಂಚು ಎತ್ತರದ ಹಸು ಆಕರ್ಷಣೆಯ ಕೇಂದ್ರಬಿಂದುವಾಗಿರಲಿದೆ.

ADVERTISEMENT

ಅ.30ರಿಂದ ನ.5ರವರೆಗೆ ಈ ಜಾನುವಾರು ಮೇಳೆ ನಡೆಯಲಿದ್ದು, ಈಗಾಗಲೇ ಪ್ರಾಣಿಗಳ ವ್ಯಾಪಾರಿಗಳು, ಪ್ರವಾಸಿಗರು ಪುಷ್ಕರ್‌ ನಗರದಲ್ಲಿ ಬೀಡು ಬಿಟ್ಟಿದ್ದಾರೆ.

ಈ ಬಾರಿ 4,300ಕ್ಕೂ ಹೆಚ್ಚು ಪ್ರಾಣಿಗಳು ಭಾಗವಹಿಸಲಿವೆ ಎಂದು ನೋಂದಣಿಯಾಗಿದ್ದು. ಇದರಲ್ಲಿ 3,028 ಕುದುರೆಗಳು,1,306 ಒಂಟೆಗಳು ಸೇರಿವೆ. 

ಚಂಡೀಗಢ ಮೂಲದ ಬ್ರೀಡರ್ ಗ್ಯಾರಿ ಗಿಲ್ ಒಡೆತನದ ₹15 ಕೋಟಿ ಮೌಲ್ಯದ ಎರಡೂವರೆ ವರ್ಷದ ಶಹಬಾಜ್‌ ಕುದುರೆ ಮೇಳದ ಆಕರ್ಷಣೆಯ ಕೇಂದ್ರವಾಗಿದೆ. ‘ಶಹಬಾಜ್ ಹಲವು ಪ್ರದರ್ಶನಗಳಲ್ಲಿ ಬಹುಮಾನ ಪಡೆದಿದೆ. ಇದನ್ನು ₹ 15 ಕೋಟಿ ಬೆಲೆಗೆ ಕೇಳುತ್ತಿದ್ದಾರೆ’ ಎಂದು ಗಿಲ್‌ ಹೇಳಿದರು.

ಪ್ರದರ್ಶನದ ಮತ್ತೊಂದು ಆಕರ್ಷಣೆ 1,500 ಕೆ.ಜಿ ತೂಕದ ಅನ್ಮೋಲ್‌ ಹೆಸರಿನ ಕೋಣ. ಇದರ ಬೆಲೆ ₹23 ಕೋಟಿ. ಕೋಣದ ಮಾಲೀಕ ಪಾಲ್ಮಿಂದ್ರ ಗಿಲ್‌. ‘ಐಷಾರಾಮಿಯಾಗಿ ಈ ಕೋಣವನ್ನು ಬೆಳೆಸುತ್ತೇವೆ. ಪ್ರತಿ ದಿನ ಹಾಲು, ದೇಸಿ ತುಪ್ಪ, ಒಣ ಹಣ್ಣುಗಳನ್ನು ಕೊಡುತ್ತೇವೆ’ ಎಂದು ಗಿಲ್‌ ವಿವರಿಸಿದರು.

ಇಂಥದ್ದೇ ‘ತಾರಾ ಮೌಲ್ಯ’ದ ಕೋಣದ ಸಾಲಿಗೆ ಸೇರುತ್ತದೆ ಉಜ್ಜಯಿನಿಯ ರಾಣಾ ಹೆರಿನ ಕೋಣ. ಇದರ ಬೆಲೆ ₹25 ಲಕ್ಷ. ಇದು 600 ಕೆ.ಜಿ ತೂಕವಿದೆ. ಈ ಕೋಣ ಪ್ರತಿ ನಿತ್ಯ ₹1500 ಮೌಲ್ಯದ ಆಹಾರವನ್ನು ಸೇವಿಸುತ್ತದೆ. ಆಹಾರದಲ್ಲಿ ಕಡಲೆಹಿಟ್ಟು, ಮೊಟ್ಟೆ, ಹಾಲು, ತುಪ್ಪ ಮತ್ತು ಲಿವರ್ ಟಾನಿಕ್‌ ಸೇರಿರುತ್ತದೆಯಂತೆ.

ಮೇಳಕ್ಕೆ ಭದ್ರತೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜಸ್ಥಾನ ಪಶುಸಂಗೋಪನಾ ಇಲಾಖೆ ಪ್ರಾಣಿಗಳ ಆರೋ‌ಗ್ಯದ ಬಗ್ಗೆ ನಿಗಾ ಇರಿಸುವುದಾಗಿ ಹೇಳಿದೆ.

ಈ ಮೇಳದಲ್ಲಿ ಪ್ರಾಣಿಗಳ ವ್ಯಾಪಾರ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳೂ ನಡೆಯಲಿವೆ. ಉತ್ತಮ ಹಾಲು ಉತ್ಪಾದಕ ಪ್ರಾಣಿ, ಉತ್ತಮ ಕುದುರೆ ತಳಿ, ಉತ್ತಮ ಒಂಟೆಯ ಉಡುಪು ಸೇರಿದಂತೆ ಹಲವು ರೀತಿಯ ಸ್ಪರ್ಧೆಗಳು ಮೇಳದ ಮೆರುಗು ಹೆಚ್ಚಿಸಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.