ADVERTISEMENT

ದೆಹಲಿ–ದೋಹಾ ಕತಾರ್ ಏರ್‌ವೇಸ್‌ನಲ್ಲಿ ಕಾಣಿಸಿದ ಹೊಗೆ; ಕರಾಚಿಯಲ್ಲಿ ಇಳಿದ ವಿಮಾನ

ಪಿಟಿಐ
Published 21 ಮಾರ್ಚ್ 2022, 6:41 IST
Last Updated 21 ಮಾರ್ಚ್ 2022, 6:41 IST
ಕತಾರ್‌ ಏರ್‌ವೇಸ್‌
ಕತಾರ್‌ ಏರ್‌ವೇಸ್‌   

ನವದೆಹಲಿ: ದೆಹಲಿಯಿಂದ ದೋಹಾಗೆ ಹೊರಟ್ಟಿದ್ದ ಕತಾರ್‌ ಪ್ರಯಾಣಿಕ ವಿಮಾನವು ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿದೆ. ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಸೂಚನೆ ಸಿಗುತ್ತಿದ್ದಂತೆ ತುರ್ತಾಗಿ ಇಳಿಸಲಾಗಿದೆ ಎಂದು ಕತಾರ್‌ ವಿಮಾನಯಾನ ಸಂಸ್ಥೆಯು ತಿಳಿಸಿದೆ.

ವಿಮಾನವು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಪ್ರಯಾಣಿಕರನ್ನು ಕ್ರಮವಾಗಿ ಮೆಟ್ಟಿಲುಗಳ ಮೂಲಕ ಹೊರಗೆ ಇಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಬೆಳಗಿನ ಜಾವ 3:50ಕ್ಕೆ ದೆಹಲಿಯಿಂದ ಪ್ರಯಾಣ ಆರಂಭಿಸಿದ್ದ ವಿಮಾನವು ಬೆಳಿಗ್ಗೆ 5:30ಕ್ಕೆ ಕರಾಚಿಯಲ್ಲಿ ಇಳಿಯಿತು.

ADVERTISEMENT

ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಹಾಗೂ ಪ್ರಯಾಣಿಕರನ್ನು ದೋಹಾಗೆ ತಲುಪಿಸಲು ಪ್ರತ್ಯೇಕ ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಎದುರಾದ ಅನನುಕೂಲಕ್ಕೆ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.

'ದೆಹಲಿಯಿಂದ ದೋಹಾಗೆ ಪ್ರಯಾಣಿಸಬೇಕಿದ್ದ QR579 ವಿಮಾನವು ಮಾರ್ಚ್‌ 21ರಂದು ಕರಾಚಿಯ ಕಡೆಗೆ ತಿರುಗಿಸಲಾಯಿತು. ಸರಕು ಸಂಗ್ರಹ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡ ಸೂಚನೆ ಸಿಕ್ಕಿದ್ದರಿಂದ ತುರ್ತು ನಿರ್ಧಾರ ಕೈಗೊಳ್ಳಲಾಯಿತು' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.