ADVERTISEMENT

ಕ್ಯೂಎಸ್‌ ರ‍್ಯಾಂಕ್: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಸ್ಥಾನ

ಪಿಟಿಐ
Published 5 ನವೆಂಬರ್ 2025, 4:48 IST
Last Updated 5 ನವೆಂಬರ್ 2025, 4:48 IST
ಐಐಎಸ್‌ಸಿ ಬೆಂಗಳೂರು
ಐಐಎಸ್‌ಸಿ ಬೆಂಗಳೂರು   

ನವದೆಹಲಿ: ಲಂಡನ್‌ ಮೂಲದ ಕ್ಯೂಎಸ್‌ ಮಂಗಳವಾರ ಬಿಡುಗಡೆ ಮಾಡಿರುವ ಏಷ್ಯಾದ 100 ಅಗ್ರ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿ ಹಲವು ಸಂಸ್ಥೆಗಳು ಸ್ಥಾನ ಪಡೆದಿವೆ.

‘ಕ್ಯೂಎಸ್‌ ವರ್ಲ್ಡ್ ಯುನಿವರ್ಸಿಟಿ ಏಷ್ಯಾ ರ‍್ಯಾಂಕಿಂಗ್‌ನ 100 ಅಗ್ರ ಸಂಸ್ಥೆಗಳಲ್ಲಿ ಭಾರತದ ಏಳು ಸಂಸ್ಥೆಗಳು ಸ್ಥಾನ ಪಡೆದಿವೆ. 200 ಅಗ್ರ ಸಂಸ್ಥೆಗಳ ಪಟ್ಟಿಯಲ್ಲಿ 20, 500 ಅಗ್ರ ಸಂಸ್ಥೆಗಳ ಪಟ್ಟಿಯಲ್ಲಿ 66 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ’ ಎಂದು ಕ್ಯೂಎಸ್ ಪ್ರಕಟಣೆಯಲ್ಲಿ ತಿಳಿಸಿವೆ.

ಐಐಟಿ–ದೆಹಲಿ, ಐಐಟಿ–ಮದ್ರಾಸ್‌, ಐಐಟಿ–ಬಾಂಬೆ, ಐಐಟಿ–ಕಾನ್ಪುರ ಹಾಗೂ ಐಐಟಿ–ಖರಗಪುರ 100 ಅಗ್ರ ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ.

ADVERTISEMENT

ಐಐಟಿ–ದೆಹಲಿ 59ನೇ ಸ್ಥಾನ ಪಡೆದಿದ್ದು, ಸತತ ಐದನೇ ವರ್ಷವೂ ಭಾರತದ ಅತ್ಯುತ್ತಮ ಇನ್ಸ್‌ಟಿಟ್ಯೂಟ್‌ ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.