
ಅಮಿತ್ ಶಾ
ಜೈಪುರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶುರುವಾಗಿದ್ದ ‘ಪ್ರಶ್ನೆ ಪತ್ರಿಕೆ ಸೋರಿಕೆ’ ಸಂಸ್ಕೃತಿಯನ್ನು ಭಜನ್‌ಲಾಲ್ ಶರ್ಮಾ ಸರ್ಕಾರವು ಅಂತ್ಯಗೊಳಿಸಿದ್ದು, ರಾಜಸ್ಥಾನಕ್ಕೆ ಈ ಸಮಸ್ಯೆಯಿಂದ ಮುಕ್ತಿ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಕಾನ್‌ಸ್ಟೇಬಲ್ ನೇಮಕಾತಿ ಸಮಾರಂಭದಲ್ಲಿ ಸಚಿವ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿ, ‘ ಉತ್ತಮ ಆಡಳಿತಕ್ಕೆ ಸಾರ್ವಜನಿಕ ಸೇವೆಗಳಲ್ಲಿನ ನೇಮಕಾತಿಯು ಪಾರದರ್ಶವಾಗಿ ಇರಬೇಕಾದ ಅಗತ್ಯವಿದೆ. ನೇಮಕಾತಿಯೇ ಭ್ರಷ್ಟಾಚಾರದಿಂದ ಕೂಡಿದ್ದರೆ ಅಂಥ ರಾಜ್ಯ ಮಂದುವರಿಯಲು ಸಾಧ್ಯವಿಲ್ಲ’ ಎಂದೂ ಹೇಳಿದ್ದಾರೆ.
ಜತೆಗೆ ‘ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದಾಗಷ್ಟೇ ರಾಜ್ಯದ ಅಭಿವೃದ್ಧಿ ಸಾಧ್ಯ. ಭಜನ್‌ಲಾಲ್ ಸರ್ಕಾರವು ‘ಪ್ರಶ್ನೆ ಪತ್ರಿಕೆ ಸೋರಿಕೆ’ ಅಂತ್ಯಗೊಳಿಸಿದ್ದು ಮಾತ್ರವಲ್ಲದೇ, ಕಾನೂನು ವ್ಯವಸ್ಥೆ ಭದ್ರಗೊಳಿಸಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣವು ಶೇ 14ರಷ್ಟು ಕಡಿಮೆಯಾಗಿದೆ’ ಎಂದೂ ಸಚಿವ ಪತ್ರಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.