ADVERTISEMENT

ಸುಬ್ರತೊ ದಾಸ್ ಪತ್ನಿಗೆ ಚುಚ್ಚುಮದ್ದು ನೀಡಲು ನಿರಾಕರಣೆ: ವೈದ್ಯೆ ಅಮಾನತು

ಪಿಟಿಐ
Published 7 ಜುಲೈ 2025, 13:32 IST
Last Updated 7 ಜುಲೈ 2025, 13:32 IST
<div class="paragraphs"><p>ರೇಬಿಸ್‌ ಚುಚ್ಚುಮದ್ದು</p></div>

ರೇಬಿಸ್‌ ಚುಚ್ಚುಮದ್ದು

   

Credit: iStock Photo

ಧಾರ್/ಮಧ್ಯಪ್ರದೇಶ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಬ್ರತೊ ದಾಸ್ ಅವರ ಪತ್ನಿಗೆ ರೇಬಿಸ್‌ ನಿರೋಧಕ ಚುಚ್ಚುಮದ್ದು ನೀಡಲು ನಿರಾಕರಿಸಿದ ಆರೋಪದಡಿ ಮಧ್ಯಪ್ರದೇಶ ಧಾರ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸುಬ್ರತೊ ದಾಸ್–ಸುಶ್ಮಿತಾ ದಾಸ್ ದಂಪತಿ ಧಾರ್ ಜಿಲ್ಲಾ ಕೇಂದ್ರದಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಪ್ರವಾಸಿತಾಣ ಮಾಂಡುವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಸುಶ್ಮಿತಾ ಅವರ ಕಾಲಿಗೆ ಕಚ್ಚಿತ್ತು. ಕೂಡಲೇ ಸುಬ್ರತೊ ದಾಸ್–ಸುಶ್ಮಿತಾ ದಂಪತಿ ರೇಬಿಸ್‌ ನಿರೋಧಕ ಚುಚ್ಚುಮದ್ದು ಪಡೆಯಲು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿನ ವೈದ್ಯರು ಲಭ್ಯವಿಲ್ಲ ಎಂಬ ಕಾರಣ ನೀಡಿ ಅವರಿಗೆ ಚುಚ್ಚುಮದ್ದು ನೀಡಿಲು ನಿರಾಕರಿದ್ದರು. ಅಲ್ಲದೆ ಅವರನ್ನು ದೂರದ ಆರೋಗ್ಯ ಕೇಂದ್ರಕ್ಕೆ ತೆರಳಲು ಸಲಹೆ ನೀಡಿದ್ದರು ಎನ್ನಲಾಗಿದೆ.

‘ಕೆಟ್ಟ ವಿಚಾರವೆಂದರೆ ವೈದ್ಯೆ ನನ್ನ ಪತ್ನಿಯನ್ನು ಪರೀಕ್ಷೆ ಕೂಡಾ ನಡೆಸಿಲ್ಲ. ಒಬ್ಬ ವೈದ್ಯೆಯಾದ ಅವರು ಅದನ್ನು ಮಾಡಬೇಕಿತ್ತು. ಅಂತಿಮವಾಗಿ ಸುಶ್ಮಿತಾ ಅವರು ಮಾಂಡು ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಪಡೆದಿದ್ದಾರೆ’ ಎಂದು ಸುಬ್ರತೊ ಅವರು ‘ಪಿಟಿಐ’ಗೆ ತಿಳಿಸಿದ್ದಾರೆ.

‘ಅನುಚಿತ ನಡವಳಿಕೆ ಹಿನ್ನೆಲೆಯಲ್ಲಿ ಡಾ. ಚಾಂದನಿ ದಾಬ್ರೋಲಿಯಾ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆ ಸಂಬಂಧ ಉನ್ನತಮಟ್ಟದ ತನಿಖೆಗೂ ಆದೇಶಿಸಲಾಗಿದೆ’ ಎಂದು ಧಾರ್ ಜಿಲ್ಲಾಧಿಕಾರಿ ಪ್ರಿಯಾಂಕ್ ಮಿಶ್ರಾ ತಿಳಿಸಿದ್ದಾರೆ.

‘ಯಾವುದೇ ಸರ್ಕಾರಿ ಸಂಸ್ಥೆ, ಆಸ್ಪತ್ರೆ, ಕಾಲೇಜು, ಶಾಲೆ, ಸೇವಾ ಕೇಂದ್ರ ಅಥವಾ ಕಚೇರಿಯಾಗಿರಲಿ, ಸೇವೆ ಬಯಸುವ ಪ್ರತಿಯೊಬ್ಬ ನಾಗರಿಕನನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ನಿಗದಿತ ಸಮಯದೊಳಗೆ ಅಗತ್ಯವಿರುವ ಸೇವೆಯನ್ನು ನೀಡಬೇಕು’ ಎಂದು ಮಿಶ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.