ADVERTISEMENT

ರೇಡಿಯೊ ಕಾಲರ್ ಅಳವಡಿಸಿದ್ದ ಹುಲಿ ನಾಪತ್ತೆ! ಹುಡುಕಾಟ ಆರಂಭ

ಪಿಟಿಐ
Published 12 ಅಕ್ಟೋಬರ್ 2022, 9:54 IST
Last Updated 12 ಅಕ್ಟೋಬರ್ 2022, 9:54 IST
ಹುಲಿ
ಹುಲಿ   

ಡೆಹರಾಡೂನ್: ರೇಡಿಯೊ ಕಾಲರ್ ಅಳವಡಿಸಿದ್ದ ಹುಲಿಯೊಂದು ನಾಪತ್ತೆಯಾಗಿರುವ ಘಟನೆ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿದೆ.

ಎರಡು ವರ್ಷದ ಹಿಂದೆ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಿಂದ ತರಲಾಗಿದ್ದ ಹುಲಿ ರಾಜಾಜಿ ವನದಲ್ಲಿ ಇತ್ತು. ಟಿ3 ಹೆಸರಿನ ಈ ಹುಲಿಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು.

ಆದರೆ, ಈ ಹುಲಿ ಕಳೆದ ಮೂರು ದಿನದಿಂದ ರಾಜಾಜಿ ಕಾಡಿನಲ್ಲಿ ಕಾಣಿಸುತ್ತಿಲ್ಲ. ರೇಡಿಯೊ ಕಾಲರ್ ಕೂಡ ಸಿಗ್ನಲ್‌ಗಳನ್ನು ತೋರಿಸುತ್ತಿಲ್ಲ. ಬಹುಶಃ ರೇಡಿಯೊ ಕಾಲರ್‌ಗೆ ಹಾನಿಯಾಗಿರಬಹುದು ಅಥವಾ ರೇಡಿಯೊ ಕಾಲರ್‌ನ್ನು ಹುಲಿ ಬಿಡಿಸಿಕೊಂಡಿರಬಹುದು ಎಂದು ರಾಜಾಜಿ ಉದ್ಯಾನದ ಮುಖ್ಯ ವನ್ಯಜೀವಿ ಸಂರಕ್ಷಕ ಸಮೀರ್ ಸಿನ್ಹಾ ತಿಳಿಸಿದ್ದಾರೆ.

ADVERTISEMENT

ಟಿ3 ಹುಲಿ ಉತ್ತರ ಪ್ರದೇಶದ ಅರಣ್ಯವನ್ನು ಪ್ರವೇಶಿಸಿರಬಹುದು. ಉತ್ತರ ಪ್ರದೇಶ ಅರಣ್ಯ ಅಧಿಕಾರಿಗಳ ಸಹಯೋಗದೊಂದಿಗೆ ಹುಲಿಯನ್ನು ಹುಡುಕುವ ಕಾರ್ಯಾಚರಣೆ ನಡೆದಿದೆ ಎಂದು ಸಮೀರ್ ಸಿನ್ಹಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.