ADVERTISEMENT

ರಫೇಲ್‌ ಒಪ್ಪಂದದಲ್ಲಿ ರಿಲಯನ್ಸ್‌ ಜೊತೆ ಬಲವಂತದ ಒಪ್ಪಂದ: ಡಸಾಲ್ಟ್‌ ಕಂಪನಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 9:34 IST
Last Updated 16 ಅಕ್ಟೋಬರ್ 2018, 9:34 IST
   

ಪ್ಯಾರಿಸ್‌: ರಫೇಲ್‌ ಖರೀದಿ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೆ ಮಹತ್ವದ ದಾಖಲೆಗಳು ಬಿಡುಗಡೆಯಾಗಿದ್ದು ರಿಲಯನ್ಸ್‌ ಕಂಪನಿಯನ್ನು ಬಲವಂತವಾಗಿ ಪಾಲುದಾರ ಕಂಪೆನಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಫ್ರಾನ್ಸ್‌ನ ಡಸಾಲ್ಟ್‌ ಕಂಪೆನಿ ಹೇಳಿರುವ ಪತ್ರವೊಂದು ಬಿಡುಗಡೆಯಾಗಿದೆ.

ಫ್ರೆಂಚ್‌ನ ’ಪೋರ್ಟಲ್ ಏವಿಯೇಶನ್‌’ ಎಂಬ ಬ್ಲಾಗ್‌ ಪತ್ರವನ್ನು ಬಿಡುಗಡೆ ಮಾಡಿದೆ. ರಫೇಲ್ ಯುಧ್ಧ ವಿಮಾನಗಳನ್ನು ನಿರ್ಮಾಣ ಮಾಡುತ್ತಿರುವ ಡಸಾಲ್ಟ್‌ ಕಂಪೆನಿ ತಮ್ಮ ಕಾರ್ಮಿಕ ಸಂಘಟನೆಗಳ ಜೊತೆ ನಡೆಸಿದ ಮಾತುಕತೆ ವೇಳೆ ಅನಿಲ್‌ ಅಂಬಾನಿ ಕಂಪೆನಿಯನ್ನು ಬಲವಂತವಾಗಿ ಪಾಲುದಾರ ಕಂಪನಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಸಿಎಫ್‌ಡಿಟಿ ಮತ್ತು ಸಿಜಿಟಿ ಎಂಬ ಎರಡು ಕಾರ್ಮಿಕ ಸಂಘಟನೆಗಳು ಬಿಡುಗಡೆ ಮಾಡಿರುವ ಪತ್ರದಲ್ಲಿ ರಿಲಯನ್ಸ್‌ ಜೊತೆ ಬಲವಂತವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಮದು ಡಸಾಲ್ಟ್‌ ಕಂಪೆನಿ ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ADVERTISEMENT

2017 ಮೇ 13ರಂದು ನಡೆದು ಕೆಲವು ನಿಮಿಷಗಳ ಮಾತುಕತೆಯನ್ನು ವಿವರಗಳನ್ನು ಕಾರ್ಮಿಕ ಸಂಘಟನೆಗಳು ಬಿಡುಗಡೆಗೊಳಿಸುವ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸಿದೆ. ಇದು ₹59 ಸಾವಿರ ಕೋಟಿ ಮೊತ್ತದ ಯೋಜನೆಯಾಗಿದೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.