ADVERTISEMENT

Watch | ವಾಯುಪಡೆಗೆ ರಫೇಲ್‌: ಅಂಬಾಲಾ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಹಾರಾಟ

ಏಜೆನ್ಸೀಸ್
Published 10 ಸೆಪ್ಟೆಂಬರ್ 2020, 6:24 IST
Last Updated 10 ಸೆಪ್ಟೆಂಬರ್ 2020, 6:24 IST
ಅಂಬಾಲಾ ವಾಯುನೆಲೆಯಲ್ಲಿ ಹಾರಾಟ ನಡೆಸುತ್ತಿರುವ ರಫೇಲ್‌ ಯುದ್ಧ ವಿಮಾನಗಳು
ಅಂಬಾಲಾ ವಾಯುನೆಲೆಯಲ್ಲಿ ಹಾರಾಟ ನಡೆಸುತ್ತಿರುವ ರಫೇಲ್‌ ಯುದ್ಧ ವಿಮಾನಗಳು   

ಅಂಬಾಲಾ: ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗುವುದಕ್ಕೂ ಮುನ್ನ ಇಲ್ಲಿನ ವಾಯುನೆಲೆಯಲ್ಲಿ ರಫೇಲ್‌ ಯುದ್ಧವಿಮಾನಗಳು ಹಾರಾಟ ನಡೆಸುತ್ತಿವೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮತ್ತು ಫ್ಲಾರೆನ್ಸ್‌ ಪಾರ್ಲಿ ಅವರು ರಫೇಲ್‌ ಯುದ್ಧ ವಿಮಾನಗಳ ಹಾರಾಟವನ್ನು ವಿಕ್ಷೀಸುತ್ತಿದ್ದಾರೆ.

₹59,000 ಕೋಟಿ ವೆಚ್ಚದಲ್ಲಿ ಭಾರತವು ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುತ್ತಿದ್ದು, ಈ ಪೈಕಿ 10 ಯುದ್ಧ ವಿಮಾನಗಳನ್ನು ಡಾಸೊ‌ ಏವಿಯೇಷನ್‌ ಕಂಪನಿ ಹಸ್ತಾಂತರಿಸಿದೆ. ಈ ಪೈಕಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲೆಟ್‌ಗಳ ತರಬೇತಿಗಾಗಿ ಫ್ರಾನ್ಸ್‌ನಲ್ಲೇ ಇದ್ದು, ಉಳಿದ ಐದು ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿಳಿದಿದ್ದವು. ನವೆಂಬರ್‌ನಲ್ಲಿ ಮತ್ತೆ 4–5 ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. 2021ರೊಳಗೆ 36 ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.