ADVERTISEMENT

ಟಿಬೆಟ್‌ ಪ್ರದೇಶದಲ್ಲಿ ವೈಮಾನಿಕ ದಾಳಿ ತಡೆಯಲು ರಫೇಲ್ ಸಶಕ್ತ’: ಧನೋವಾ

ಬಾಲಾಕೋಟ್‌ ದಾಳಿ ಸಂದರ್ಭದಲ್ಲಿ ರಫೇಲ್‌ ಇದ್ದಿದ್ದರೆ ಪಾಕಿಸ್ತಾನದ ಅರಿವಿಗೂ ಬರುತ್ತಿರಲಿಲ್ಲ

ಪಿಟಿಐ
Published 3 ಆಗಸ್ಟ್ 2020, 1:30 IST
Last Updated 3 ಆಗಸ್ಟ್ 2020, 1:30 IST
ಬಿ.ಎಸ್‌. ಧನೋವಾ
ಬಿ.ಎಸ್‌. ಧನೋವಾ   

ನವದೆಹಲಿ: ಪರ್ವತಶ್ರೇಣಿಯಾದ ಟಿಬೆಟ್ ಭಾಗದಲ್ಲಿ ಚೀನಾ ಜೊತೆಗೆ ವೈಮಾನಿಕ ಯುದ್ಧ ನಡೆದರೆ ರಫೇಲ್‌ ಯುದ್ಧ ವಿಮಾನ ಭಾರತಕ್ಕೆ ಮೈಲುಗೈ ಸಾಧಿಸಿಕೊಡಲಿದೆ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್‌. ಧನೋವಾ ಅಭಿಪ್ರಾಯಪಟ್ಟಿದ್ದಾರೆ.

ಬಾಲಾಕೋಟ್‌ ದಾಳಿಯ ರುವಾರಿ ಎಂದೇ ಗುರುತಿಸಿಕೊಂಡಿರುವ ಧನೋಆ, ‘ರಫೇಲ್‌ ಯುದ್ಧ ವಿಮಾನಗಳು ಹಾಗೂ ಎಸ್‌–400 ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಭಾರತದೊಡನೆ ಯುದ್ಧಕ್ಕೆ ಮೊದಲು, ಶತ್ರುರಾಷ್ಟ್ರಗಳು ಮತ್ತೊಮ್ಮೆ ಯೋಚಿಸಲಿವೆ’ ಎಂದರು. ‘ಪಾಕಿಸ್ತಾನದ ವಿಚಾರಕ್ಕೆ ಬಂದರೆ, ರಫೇಲ್‌ ಹಾಗೂ ಎಸ್‌– 400 ಕ್ಷಿಪಣಿಗಳು ಪಾಕಿಸ್ತಾನದ ಯುದ್ಧವಿಮಾನಗಳನ್ನು ಪಾಕಿಸ್ತಾನದ ವಾಯುಪ್ರದೇಶದೊಳಗೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಫೆ.27ರಂದು ನಡೆದಿದ್ದ ಬಾಲಾಕೋಟ್‌ ದಾಳಿ ಸಂದರ್ಭದಲ್ಲಿ ಭಾರತದ ಬಳಿ ರಫೇಲ್‌ ಇರುತ್ತಿದ್ದರೆ, ಪಾಕಿಸ್ತಾನಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

ಫ್ರಾನ್ಸ್‌ನಲ್ಲಿ ಇರುವ ರಫೇಲ್‌ ಯುದ್ಧ ವಿಮಾನಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಪ್ರಸ್ತುತ ಭಾರತ ಖರೀದಿಸಿರುವ ರಫೇಲ್‌ ಹೊಂದಿದೆ. ಲೇಹ್‌ನಂಥ ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸುವಂಥ ಸಾಮರ್ಥ್ಯ ಇವುಗಳಿಗಿವೆ. ಶತ್ರುರಾಷ್ಟ್ರಗಳ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನೂ ಧ್ವಂಸಗೊಳಿಸುವ, ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನೂ ನಾಶಗೊಳಿಸುವ ಎಲೆಕ್ಟ್ರಾನಿಕ್‌ ವಾರ್‌ಫ್ಯಾರ್‌ ಸ್ಯೂಟ್‌ ‘ಸ್ಪೆಕ್ಟ್ರಾ’ ಹೊಂದಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.