ADVERTISEMENT

ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್‌ಐಆರ್: ರಾಹುಲ್ ಗಾಂಧಿ ಆರೋಪ

ಪಿಟಿಐ
Published 9 ನವೆಂಬರ್ 2025, 6:52 IST
Last Updated 9 ನವೆಂಬರ್ 2025, 6:52 IST
   

ಪಚ್‌ಮಢಿ (ಮಧ್ಯ ಪ್ರದೇಶ): ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಮತಗಳ್ಳತನವನ್ನು ಮುಚ್ಚಿ ಹಾಕುವ ಹಾಗೂ ಅದನ್ನು ಕಾನೂನುಬದ್ಧ ಮಾಡುವ ಪ್ರಯತ್ನ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಯಾಣದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಛತ್ತೀಸಗಢದಲ್ಲಿ ಮತ ಕಳ್ಳತವಾಗಿದೆ. ಮತಗಳ್ಳತನ ದೊಡ್ಡ ವಿಷಯವಾಗಿತ್ತು; ಈಗ ಎಸ್ಐಆರ್. ಇದು ಮತಗಳ್ಳತನವನ್ನು ಮರೆಮಾಚುವ ಪ್ರಯತ್ನ’ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ‌ದ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಶನಿವಾರ ನರ್ಮದಾಪುರಂನ ಪಚ್‌ಮಢಿ ಪಟ್ಟಣಕ್ಕೆ ಅವರು ಆಗಮಿಸಿದ್ದಾರೆ.

ADVERTISEMENT

‘ಕೆಲವು ದಿನಗಳ ಹಿಂದೆ, ಹರಿಯಾಣದ ಬಗ್ಗೆ ನಾನು ಪತ್ರಿಕಾಗೋಷ್ಠಿ ಮಾಡಿದ್ದೆ. ಮತ ಕಳ್ಳತನ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ. 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಹರಿಯಾಣದ ದತ್ತಾಂಶವನ್ನು ನೋಡಿದ ಬಳಿಕ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸಗಢದಲ್ಲಿಯೂ ಮತಗಳ್ಳತನ ನಡೆದಿದೆ ಎಂದು ನಾನು ನಂಬುತ್ತೇನೆ. ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ವ್ಯವಸ್ಥೆ’ ಎಂದು ರಾಹುಲ್ ಆರೋಪಿಸಿದ್ದಾರೆ,

‘ನಮ್ಮಲ್ಲಿ ಹೆಚ್ಚಿನ ಪುರಾವೆಗಳಿವೆ, ಅದನ್ನು ನಾವು ಕ್ರಮೇಣ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

‘ನಮ್ಮ ಬಳಿ ಹಲವು ವಿಭಿನ್ನ ಮಾಹಿತಿಗಳಿವೆ, ಬಹಳ ವಿವರವಾದ ಮಾಹಿತಿಗಳಿವೆ. ಈಗ ಸ್ವಲ್ಪವಷ್ಟೇ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವ, ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪಾಲುದಾರಿಕೆಯನ್ನು ರೂಪಿಸುವ ಮೂಲಕ ನೇರವಾಗಿ ಮತಗಳ್ಳತನವನ್ನು ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ಭಾರಿ ಸಮಸ್ಯೆಯಾಗುತ್ತಿದೆ. ಭಾರತ ಮಾತೆಗೆ ಹಾನಿಯಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.