ADVERTISEMENT

ತಂಗಿಯಾಗಿ ಹೇಳ್ತಿನಿ, ರಾಹುಲ್ ಯಾರನ್ನು ತಳ್ಳಲು ಸಾಧ್ಯವಿಲ್ಲ: ಪ್ರಿಯಾಂಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2024, 6:51 IST
Last Updated 20 ಡಿಸೆಂಬರ್ 2024, 6:51 IST
<div class="paragraphs"><p>ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ</p></div>

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ

   

(ಪಿಟಿಐ ಚಿತ್ರ)

ನವದೆಹಲಿ: 'ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ವಿರುದ್ಧ ಸುಳ್ಳು ಆರೋಪ ಮಾಡಲಾಗಿದ್ದು, ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ' ಎಂದು ಕಾಂಗ್ರೆಸ್ ಸಂಸದೆ, ಸಹೋದರಿ ಪ್ರಿಯಾಂಕಾ ಗಾಂಧಿ ಇಂದು (ಶುಕ್ರವಾರ) ಹೇಳಿದ್ದಾರೆ.

ADVERTISEMENT

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, 'ನನ್ನ ಸೋದರ ರಾಹುಲ್ ಗಾಂಧಿ ಯಾವತ್ತೂ ಯಾರನ್ನೂ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

'ನಾನು ರಾಹುಲ್ ಅವರ ತಂಗಿ. ಇಷ್ಟು ವರ್ಷಗಳಿಂದ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ರಾಹುಲ್ ಯಾವತ್ತೂ ಇಂತಹ ಕೃತ್ಯ ಮಾಡಲು ಸಾಧ್ಯವೇ ಇಲ್ಲ. ಈ ಬಗ್ಗೆ ದೇಶದ ಜನರಿಗೂ ಗೊತ್ತಿದೆ' ಎಂದು ರಾಹುಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

'ದೇಶವೇ ನೋಡುತ್ತಿದೆ. ಕೇಂದ್ರ ಸರ್ಕಾರ, ಬಿಜೆಪಿಯವರು ಎಷ್ಟೊಂದು ಹತಾಶೆಗೊಂಡಿದ್ದಾರೆ. ಇದರ ಪರಿಣಾಮವೇ ಇಂತಹ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ. ಏಕೆಂದರೆ ಸರ್ಕಾರವು ಅದಾನಿ ವಿಷಯದಲ್ಲಿ ಚರ್ಚೆಯನ್ನು ಬಯಸುವುದಿಲ್ಲ. ಡಾ. ಬಿ.ಆರ್. ಅಂಬೇಡ್ಕರ್‌ಗೆ ಮಾಡಿದ ಅವಮಾನವನ್ನು ದೇಶದ ಜನತೆ ಸಹಿಸುವುದಿಲ್ಲ ಎಂಬುದನ್ನು ಅರಿತಿದೆ. ಆದ್ದರಿಂದ ಗಮನ ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆ' ಎಂದು ವಯನಾಡು ಕ್ಷೇತ್ರದ ಸಂಸದೆಯಾಗಿರುವ ಪ್ರಿಯಾಂಕಾ ಹೇಳಿದ್ದಾರೆ.

ಸಂಸತ್‌ ಭವನದಲ್ಲಿ ಗುರುವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ, ಬಿಜೆಪಿ ಸಂಸದರನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ, ರಾಹುಲ್‌ ವಿರುದ್ಧ ಮಾಜಿ ಸಚಿವ ಅನುರಾಗ್‌ ಠಾಕೂರ್ ಸೇರಿದಂತೆ ಬಿಜೆಪಿಯ ಸಂಸದರು ಪಾರ್ಲಿಮೆಂಟ್‌ ಸ್ಟ್ರೀಟ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.