ADVERTISEMENT

J&K | ಪೋಷಕರನ್ನು ಕಳೆದುಕೊಂಡ 22ಮಕ್ಕಳ ಶಿಕ್ಷಣದ ವೆಚ್ಚ ಭರಿಸಲಿರುವ ರಾಹುಲ್ ಗಾಂಧಿ

ಪಿಟಿಐ
Published 29 ಜುಲೈ 2025, 7:37 IST
Last Updated 29 ಜುಲೈ 2025, 7:37 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ರಜೌರಿ/ಜಮ್ಮು: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ನಡೆಸಿದ ಶೆಲ್ಲಿಂಗ್‌ ದಾಳಿಯ ವೇಳೆ ಮೃತಪಟ್ಟ ನಾಗರಿಕರ 22 ಮಂದಿ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ADVERTISEMENT

ಮೇ 7 ರಿಂದ 10ರವರೆಗೆ ಪೂಂಚ್, ರಜೌರಿಯಲ್ಲಿ ನಡೆದ ಶೆಲ್ಲಿಂಗ್‌ ವೇಳೆ ಹಲವು ಸಾವು, ಹಾನಿಗಳು ಸಂಭವಿಸಿವೆ. ಘಟನೆಯ ಬಳಿಕ ರಾಹುಲ್‌ ಗಾಂಧಿ ಸ್ಥಳಕ್ಕೆ ತೆರಳಿ, ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಪೋಷಕರನ್ನು ಕಳೆದುಕೊಂಡ ಮಕ್ಕಳು ಶಾಲೆಗೆ ಹೋಗುವಂತೆ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಅದರಂತೆ ‍ಪೋಷಕರನ್ನು ಕಳೆದುಕೊಂಡ ಮಕ್ಕಳ ಪಟ್ಟಿಯನ್ನು ಒದಗಿಸಲಾಗಿದೆ ಎಂದು ಮೂರು ದಿನಗಳ ರಜೌರಿ ಭೇಟಿಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಹೇಳಿದ್ದಾರೆ.

ಪೂಂಚ್‌ ಜಿಲ್ಲೆಯೊಂದರಲ್ಲೇ 22 ಮಕ್ಕಳನ್ನು ಪಟ್ಟಿಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಪೋಷಕರನ್ನು ಕಳೆದುಕೊಂಡ ಇನ್ನಷ್ಟು ಮಕ್ಕಳನ್ನು ಪಟ್ಟಿ ಮಾಡಲಾಗುವುದು. ಪೂಂಚ್ ಜಿಲ್ಲೆಯಲ್ಲೇ 13 ಸಾರ್ವಜನಿಕರು ಸೇರಿ 28 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ವಿರುದ್ಧ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆಯೊಡನೆ ಗುಂಡಿನ ಚಕಮಕಿ ನಡೆಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.