ADVERTISEMENT

ರಾಯ್‌ಬರೇಲಿ: ದಿಶಾ ಸಭೆ ನಡೆಸಿದ ರಾಹುಲ್‌ ಗಾಂಧಿ

ಪಿಟಿಐ
Published 11 ಸೆಪ್ಟೆಂಬರ್ 2025, 12:56 IST
Last Updated 11 ಸೆಪ್ಟೆಂಬರ್ 2025, 12:56 IST
<div class="paragraphs"><p>ಕಾಂಗ್ರೆಸ್‌ ನಾಯಕ, ಹಾಗೂ ರಾಯ್‌ಬರೇಲಿ ಸಂಸದ ರಾಹುಲ್‌ ಗಾಂಧಿ ಅವರು ಗುರುವಾರ&nbsp;ಜಿಲ್ಲಾಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಿದರು. ಅಮೇಠಿ ಸಂಸದ ಕಿಶೋರಿ ಲಾಲ್‌ ಶರ್ಮಾ ಇದ್ದರು</p></div>

ಕಾಂಗ್ರೆಸ್‌ ನಾಯಕ, ಹಾಗೂ ರಾಯ್‌ಬರೇಲಿ ಸಂಸದ ರಾಹುಲ್‌ ಗಾಂಧಿ ಅವರು ಗುರುವಾರ ಜಿಲ್ಲಾಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಿದರು. ಅಮೇಠಿ ಸಂಸದ ಕಿಶೋರಿ ಲಾಲ್‌ ಶರ್ಮಾ ಇದ್ದರು

   

–ಪಿಟಿಐ ಚಿತ್ರ

ರಾಯ್‌ಬರೇಲಿ (ಉತ್ತರ ಪ್ರದೇಶ): ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಅವರು ಗುರುವಾರ ಜಿಲ್ಲಾಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಿದರು. ಊಂಚಾಹಾರ್‌ ಶಾಸಕ ಮನೋಜ್‌ ಕುಮಾರ್‌ ಪಾಂಡೆ ಅವರು ಸಭೆ ಬಹಿಷ್ಕರಿಸಿದರು.

ADVERTISEMENT

ಪ್ರತಿ ಮೂರು ತಿಂಗಳಿಗೊಮ್ಮೆ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಕುರಿತು ದಿಶಾ ಸಭೆ ನಡೆಸಲಾಗುತ್ತದೆ. ತಮ್ಮ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂಬಂಧ ರಾಹುಲ್‌ ಅವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿಯ ಬಚತ್‌ ಭವನ್‌ ಆಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ  ರಾಹುಲ್‌ ಜತೆಗೆ ಉತ್ತರ ಪ್ರದೇಶದ ತೋಟಗಾರಿಕಾ ಸಚಿವ ದಿನೇಶ್‌ ಪ್ರತಾಪ್‌ ಸಿಂಗ್‌, ಅಮೇಠಿ ಕ್ಷೇತ್ರದ ಸಂಸದ ಕೆ.ಎಲ್‌.ಶರ್ಮಾ ಭಾಗಿಯಾಗಿದ್ದರು. ಸಭೆಗೂ ಮುನ್ನವೇ ಮನೋಜ್‌ ಪಾಂಡೆ  ಹೊರನಡೆದರು.

ಪಾಂಡೆ ಸಮಾಜವಾದಿ ಪಕ್ಷದ ಮಾಜಿ ನಾಯಕ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಕಾಂಗ್ರೆಸ್‌ ನಾಯಕ ಹಾಗೂ ರಾಯ್‌ಬರೇಲಿ ಸಂಸದ ರಾಹುಲ್‌ ಗಾಂಧಿ ಅವರು ಗುರುವಾರ ಜಿಲ್ಲಾಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಿದರು. ಅಮೇಠಿ ಸಂಸದ ಕಿಶೋರಿ ಲಾಲ್‌ ಶರ್ಮಾ ಇದ್ದರು

‘ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿದೆ. ಈ ಕುರಿತು ರಾಹುಲ್‌ ಗಾಂಧಿ ಅವರಿಗೆ ಲಿಖಿತ ಮನವಿ ನೀಡಿ, ಪ್ರಧಾನಿ ತಾಯಿಗೆ ಆದ ಅವಮಾನವನ್ನು ಖಂಡಿಸಬೇಕು ಎಂದು ಮನವಿ ಮಾಡಿದೆ’ ಎಂದು ಪತ್ರಕರ್ತರಿಗೆ ತಿಳಿಸಿದರು.

‘ಕ್ಷೇತ್ರದ ವ್ಯಾಪ್ತಿಯಲ್ಲಿ ಏಮ್ಸ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಬೆಡ್‌ಗಳ ಕೊರತೆ ಇದೆ. ಈ ಬಗ್ಗೆ ಅವರು ಸಂಸದರಾದ ಮೇಲೆ ಎಷ್ಟು ಸಲ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದಾರೆ’ ಎಂದು ಈ ವೇಳೆ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.