ADVERTISEMENT

ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷರಾಗಲಿ‌: ಛತ್ತೀಸಗಡ ಕಾಂಗ್ರೆಸ್ ಘಟಕ ನಿರ್ಣಯ

ಪಿಟಿಐ
Published 7 ಫೆಬ್ರುವರಿ 2021, 11:14 IST
Last Updated 7 ಫೆಬ್ರುವರಿ 2021, 11:14 IST
ಭೂಪೇಶ್ ಬಘೆಲ್
ಭೂಪೇಶ್ ಬಘೆಲ್   

ನವದೆಹಲಿ: ‘ಕೇಂದ್ರ ಸರ್ಕಾರದ ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದೃಢ ನಿರ್ಧಾರ ತಳೆಯುವ ರಾಹುಲ್‌ ಗಾಂಧಿ ಮಾತ್ರವೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಸಮರ್ಥರು’ ಎಂದು ಛತ್ತೀಸಗಡದ ಮುಖ್ಯಮಂತ್ರಿ ಭೂಪೇಷ್ ಬಘೆಲ್ ಅವರು ಪ್ರತಿಪಾದಿಸಿದ್ದಾರೆ.

ರಾಹುಲ್‌ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮುಖ್ಯಮಂತ್ರಿ ಅವರು ಪಕ್ಷದ ರಾಜ್ಯ ಘಟಕದ ಸಭೆಯಲ್ಲಿ ಮಂಡಿಸಿದ್ದು, ಸಭೆ ಅನುಮೋದಿಸಿದೆ. ಈ ಮೂಲಕ ದೆಹಲಿ ನಂತರ ಒಂದು ವಾರದ ಅಂತರದಲ್ಲಿ ನಿರ್ಣಯ ಅಂಗೀಕರಿಸಿದ ಎರಡನೇ ರಾಜ್ಯ ಛತ್ತೀಸಗಡ ಆಗಿದೆ.

ಪಕ್ಷದ ಎಲ್ಲ ನಾಯಕರು ರಾಹುಲ್‌ ನಾಯಕತ್ವದಲ್ಲಿ ಪಕ್ಷ ಬಲಗೊಳ್ಳುವ ವಿಶ್ವಾಸವನ್ನು ಹೊಂದಿದ್ದಾರೆ. ಪಕ್ಷದ ಅಡಿಪಾಯವು ಅವರ ನಾಯಕತ್ವದಲ್ಲಿ ಇನ್ನಷ್ಟು ದೃಢವಾಗಲಿದೆ ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಹುಲ್‌ ಗಾಂಧಿ ಆ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ‘ಅವರಲ್ಲದೆ ಮತ್ಯಾರು? ರಾಹುಲ್‌ ಹೊರತುಪಡಿಸಿ ಬೇರೆ ನಾಯಕರು ರಾಷ್ಟ್ರದಾದ್ಯಂತ ಪ್ರವಾಸ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.