ADVERTISEMENT

ತರೂರ್‌ರನ್ನು ನಿರ್ಲಕ್ಷ್ಯಿಸಿದ ರಾಹುಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ!

ಏಜೆನ್ಸೀಸ್
Published 23 ಜನವರಿ 2026, 11:17 IST
Last Updated 23 ಜನವರಿ 2026, 11:17 IST
<div class="paragraphs"><p>ರಾಹುಲ್ ಗಾಂಧಿ, ಶಶಿ ತರೂರ್</p></div>

ರಾಹುಲ್ ಗಾಂಧಿ, ಶಶಿ ತರೂರ್

   

ಪಿಟಿಐ ಚಿತ್ರ ( ಸಂಗ್ರಹ ಚಿತ್ರ)

ನವದೆಹಲಿ: ಕೇರಳ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಿ, ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ನಾಯಕರ ನೇತೃತ್ವದಲ್ಲಿ ಇಂದು (ಶುಕ್ರವಾರ) ಕರೆದಿದ್ದ ಸಭೆಗೆ ಸಂಸದ ಶಶಿ ತರೂರ್ ಗೈರು ಹಾಜರಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಂಸದ ಶಶಿ ತರೂರ್‌ ಅವರನ್ನು ನಿರ್ಲಕ್ಷ್ಯಿಸಿಲಾಗಿತ್ತು. ಇದೇ ಕಾರಣಕ್ಕೆ ತರೂರ್‌ ಇಂದು ನಡೆದ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಕೇರಳದ ಹಿರಿಯ ನಾಯಕರ ಸಭೆಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದರು. ರಾಜ್ಯಾಧ್ಯಕ್ಷ ಸನ್ನಿ ಜೋಸೆಫ್, ಶಾಸಕಾಂಗ ಪಕ್ಷದ ನಾಯಕ ವಿ.ಡಿ. ಸತೀಸನ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ರಮೇಶ್ ಚೆನ್ನಿತ್ತಲ ಮತ್ತು ತರೂರ್ ಸೇರಿದಂತೆ ಇತರರನ್ನು ಆಹ್ವಾನಿಸಲಾಗಿತ್ತು. ಈ ಸಭೆ ರಾಹುಲ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಜನವರಿ 19ರಂದು ಕೊಚ್ಚಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು ಸನ್ಮಾನಿಸಲು ನಡೆದ ಪಕ್ಷದ 'ಮಹಾ ಪಂಚಾಯತ್' ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರು ಶಶಿ ತರೂರ್‌ ಅವರನ್ನು ನಿರ್ಲಕ್ಷ್ಯಿಸಿದ್ದರು. ವೇದಿಕೆ ಮೇಲೂ ಇತರರ ಹೆಸರನ್ನು ಹೇಳಿದ ರಾಹುಲ್‌, ತರೂರ್‌ ಹೆಸರನ್ನು ಹೇಳಿಲ್ಲ. ಇದೇ ತರೂರ್‌ ಅಸಮಾಧನಕ್ಕೆ ಕಾರಣ ಎನ್ನಲಾಗಿದೆ.

ತರೂರ್ ಅವರ ಗೈರಿನ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಕೇರಳ ರಾಜ್ಯ ಘಟಕದ ಮುಖ್ಯಸ್ಥ ಸನ್ನಿ ಜೋಸೆಫ್ ಹಾಗೂ ಕಾಂಗ್ರೆಸ್ ಲೋಕಸಭಾ ಮುಖ್ಯ ಸಚೇತಕ ಕೊಡಿಕ್ಕುನ್ನಿಲ್ ಸುರೇಶ್ ಪ್ರತಿಕ್ರಿಸಿದ್ದು, ತರೂರ್ ಅವರಿಗೆ ಈಗಾಗಲೇ ಕೆಲವು ಕಾರ್ಯಕ್ರಮಗಳಿದ್ದವು. ಹೀಗಾಗಿ ಅವರು ಸಭೆಗೆ ಗೈರಾಗಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತರೂರ್ ಅವರು ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅನೇಕ ವಿಚಾರಗಳಲ್ಲಿ ಅವರ ಹೇಳಿಕೆಗಳು ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದವು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರದ ಬಗ್ಗೆ ಮೋದಿ ಸರ್ಕಾರವನ್ನು ತರೂರ್‌ ಸಮರ್ಥಿಸಿಕೊಂಡಿದ್ದರು. ಇದು ಪಕ್ಷದ ಸಿದ್ಧಾಂತಗಳಿಗೆ ಅಥವಾ ನಿಯಮಗಳಿಗೆ ವಿರುದ್ಧವಾಗಿದ್ದವು.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಪರಂಪರೆಯನ್ನು ಸಮರ್ಥಿಸಿಕೊಳ್ಳುವ ಜತೆಗೆ ವಂಶಪಾರಂಪರ್ಯ ರಾಜಕೀಯವನ್ನು ಪ್ರಶ್ನಿಸಿದ್ದರು. ಈ ಮೂಲಕ ಅವರು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.