ADVERTISEMENT

ಅಮೇಠಿಯಂತೆ ಈ ಬಾರಿ ವಯನಾಡುವಿನಲ್ಲಿ ರಾಹುಲ್ ಗಾಂಧಿಗೆ ಸೋಲು: BJP ಅಭ್ಯರ್ಥಿ

ಪಿಟಿಐ
Published 25 ಮಾರ್ಚ್ 2024, 11:02 IST
Last Updated 25 ಮಾರ್ಚ್ 2024, 11:02 IST
<div class="paragraphs"><p>ಕೆ. ಸುರೇಂದ್ರನ್ </p></div>

ಕೆ. ಸುರೇಂದ್ರನ್

   

ವಯನಾಡ್‌: ರಾಹುಲ್ ಗಾಂಧಿಯವರಿಗೆ 2019ರಲ್ಲಿ ಅಮೇಠಿಯಲ್ಲಿ ಅದ ಪರಿಸ್ಥಿತಿ ಈ ಬಾರಿ ವಯನಾಡುವಿನಲ್ಲಿ ಆಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಹೇಳಿದ್ದಾರೆ.

ಕೆ. ಸುರೇಂದ್ರನ್‌ ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷರೂ ಹೌದು. ಭಾನುವಾರ ಬಿಡುಗಡೆ ಮಾಡಿದ ಬಿಜೆಪಿ ಪಟ್ಟಿಯಲ್ಲಿ ಅವರ ಹೆಸರಿತ್ತು. ಅವರು ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಸಿಪಿಐನ ಆನಿ ರಾಜ ವಿರುದ್ಧ ಸ್ಪರ್ಧಿಸಲಿದ್ದಾರೆ.

ADVERTISEMENT

‘ವಯನಾಡುವಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕ್ಷೇತ್ರಕ್ಕೆ ರಾಹುಲ್ ಗಾಂಧಿ ಅವರ ಕೊಡುಗೆ ಏನೂ ಇಲ್ಲ. ಕಳೆದ ಬಾರಿ ಅಮೇಠಿಯಲ್ಲಿ ಆದ ಹಾಗೆ ಈ ಬಾರಿ ಇಲ್ಲಿ ಆಗಲಿದೆ’ ಎಂದು ಸುರೇಂದ್ರನ್ ಹೇಳಿದ್ದಾರೆ.

‘ವಯನಾಡುವಿನಿಂದ ಸ್ಪರ್ಧಿಸಲು ನಮಗೆ ಹೇಳಿದ್ದಾರೆ. ಇಂಡಿಯಾ ಒಕ್ಕೂಟದ ನಾಯಕರು ಒಂದೇ ಕ್ಷೇತ್ರದಿಂದ ಏಕೆ ಕಣಕ್ಕಿಳಿದಿದ್ದಾರೆ ಎಂದು ಇಲ್ಲಿನ ಜನ ಕೇಳುತ್ತಾರೆ’ ಎಂದು ಸುರೇಂದ್ರನ್ ಹೇಳಿದ್ದಾರೆ.

ಕಳೆದ ಬಾರಿ ವಯನಾಡುವಿನಲ್ಲಿ ಸಿಪಿಐನ ಪಿ. ಸುನೀರ್‌ ವಿರುದ್ಧ 4.31 ಲಕ್ಷ ಮತಗಳ ಅಂತರದಿಂದ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರು. ಬಿಜೆಪಿ ಹಾಗೂ ಭಾರತ ಧರ್ಮ ಜನ ಸೇನಾ ಪಕ್ಷದ ಮೈತ್ರಿ ಅಭ್ಯರ್ಥಿ ತುಷಾರ್ ವೆಳ್ಳಾಪಳ್ಳಿ 78,816 ಮತಗಳನ್ನು ಪಡೆದು ಸೋಲನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.