ADVERTISEMENT

ರೈಲ್‌ ನೀರಿನ ದರ ಲೀಟರ್‌ಗೆ ₹14: ಸೆ.22ರಿಂದ ಪರಿಷ್ಕೃತ ದರ ಜಾರಿಗೆ

ಪಿಟಿಐ
Published 20 ಸೆಪ್ಟೆಂಬರ್ 2025, 15:53 IST
Last Updated 20 ಸೆಪ್ಟೆಂಬರ್ 2025, 15:53 IST
   

ನವದೆಹಲಿ: ರೈಲ್ವೆ ಮಂಡಳಿಯು ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಮಾರಾಟ ಮಾಡುವ  ‘ರೈಲ್‌ ನೀರಿನ’ ದರವನ್ನು ಲೀಟರ್‌ಗೆ ₹1 ಕಡಿಮೆ ಮಾಡಿದೆ. 1 ಲೀಟರ್‌ ನೀರಿನ ಬಾಟಲಿಗೆ ₹15 ಇದ್ದ ದರವು ಈಗ ₹14ಕ್ಕೆ ಇಳಿಕೆಯಾಗಿದೆ. 500 ಎಂ.ಎಲ್‌ನ ನೀರಿನ ಬಾಟಲಿಗೆ ಗ್ರಾಹಕರು ₹10ರ ಬದಲು ₹9 ಪಾವತಿಸಿದರೆ ಸಾಕು.

‘ಐಆರ್‌ಸಿಟಿಸಿ ಮತ್ತು ಎಲ್ಲ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿ ಶನಿವಾರ ಪರಿಷ್ಕೃತ ದರದ ಸುತ್ತೋಲೆ ಹೊರಡಿಸಿದೆ. ಸೆ.22ರಿಂದ ಪರಿಷ್ಕೃತ ದರ  ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT