ADVERTISEMENT

‘ರೈಲ್ವೆ ಮಂಡಳಿಗೆ ಸಿಬ್ಬಂದಿಯೇ ಸದಸ್ಯರಾಗಲಿ’

ರೈಲ್ವೆ ಇಲಾಖೆ ಸಿಬ್ಬಂದಿ ಒತ್ತಾಯ

ಪಿಟಿಐ
Published 22 ಡಿಸೆಂಬರ್ 2018, 20:07 IST
Last Updated 22 ಡಿಸೆಂಬರ್ 2018, 20:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಭಾರತೀಯ ರೈಲ್ವೆಯ ಉನ್ನತ ಸಂಸ್ಥೆಯಾಗಿರುವ ರೈಲ್ವೆ ಮಂಡಳಿಯ ಸದಸ್ಯ ಸ್ಥಾನಕ್ಕೆ ಭಾರತೀಯ ರೈಲ್ವೆ ಸಿಬ್ಬಂದಿ ಸೇವೆ (ಐಪಿಆರ್‌ಎಸ್‌) ಕೇಡರ್‌ ಹೊಂದಿದವರನ್ನು ಮಾತ್ರ ಪರಿಗಣಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

‘ಸಿಬ್ಬಂದಿ ಕೋಟಾದಡಿ ಮಂಡಳಿಗೆ ಸದಸ್ಯರಾಗಿ ನೇಮಕ ಮಾಡುವ ವೇಳೆ, ನಾಗರಿಕ ಸೇವೆಯ ಎಲ್ಲ ಕೇಡರ್‌ನ ಅಧಿಕಾರಿಗಳನ್ನೂ ಪರಿಗಣಿಸಲಾಗುತ್ತಿದೆ. ಇದರಿಂದ, ಸಚಿವಾಲಯದ ಮಾನವ ಸಂಪನ್ಮೂಲ ನಿರ್ವಹಣೆ ಮಾಡುತ್ತಿರುವ ಐಪಿಆರ್‌ಎಸ್‌ ಕೇಡರ್‌ನ ಸಿಬ್ಬಂದಿಗೆ ಅನ್ಯಾಯವಾಗುತ್ತಿದೆ. ಇದೊಂದು ಸದಸ್ಯ ಸ್ಥಾನವನ್ನು ಐಪಿಆರ್‌ಎಸ್‌ ಮಾಡಿರುವವರಿಗೆ ಮಾತ್ರ ಮೀಸಲಿಡಬೇಕು’ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

ಸದ್ಯ, ಸಂಚಾರ, ಲೆಕ್ಕ ನಿರ್ವಹಣೆ, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಸಿಗ್ನಲಿಂಗ್‌, ಆರ್‌ಪಿಎಫ್‌ ಕೂಡ ನಾಗರಿಕ ಸೇವಾ ಕೇಡರ್‌ ಹೊಂದಿವೆ. ಸಿಬ್ಬಂದಿ ಕೋಟಾದಡಿ ಸದಸ್ಯರಾಗಿ ನೇಮಿಸುವ ವೇಳೆ ಈ ವಿಭಾಗದ ಸಿಬ್ಬಂದಿಯನ್ನೂ ಪರಿಗಣಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.