ADVERTISEMENT

ರೈಲ್ವೆ ನಿಲ್ದಾಣ ಅಭಿವೃದ್ಧಿ ಮಂಡಳಿ ಸ್ಥಗಿತಗೊಳಿಸಿದ ರೈಲ್ವೆ ಮಂಡಳಿ

ಪಿಟಿಐ
Published 19 ಅಕ್ಟೋಬರ್ 2021, 6:36 IST
Last Updated 19 ಅಕ್ಟೋಬರ್ 2021, 6:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದ್ದ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಂಡಳಿ (ಐಆರ್‌ಎಸ್‌ಡಿಸಿ)ಯನ್ನು ಸ್ಥಗಿತಗೊಳಿಸುವುದಾಗಿ ರೈಲ್ವೆ ಮಂಡಳಿ ತಿಳಿಸಿದೆ.

ರೈಲ್ವೆ ಮಂಡಳಿ ಸೋಮವಾರ ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಈ ಮೂಲಕ ರೈಲ್ವೆ ಮಂಡಳಿಯ ಎರಡನೇ ಸಂಸ್ಥೆಯೊಂದನ್ನು ಮುಚ್ಚಿದಂತಾಗಿದೆ. ಇದೇ ಸೆಪ್ಟೆಂಬರ್ 7ರಂದು ಭಾರತೀಯ ರೈಲ್ವೆ ಪರ್ಯಾಯ ಇಂಧನ ಸಂಸ್ಥೆಯನ್ನು (ಐಆರ್‌ಒಎಎಫ್‌) ರದ್ದುಗೊಳಿಸಿತ್ತು.

ಹಣಕಾಸು ಸಚಿವಾಲಯದ ಶಿಫಾರಸಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಚಿವಾಲಯವು ನೀಡಿರುವ ವರದಿಯಲ್ಲಿ ಸರ್ಕಾರದ ಸಂಸ್ಥೆಗಳನ್ನು ಮುಚ್ಚುವುದು ಅಥವಾ ಸಚಿವಾಲಯದ ಅಡಿಯಲ್ಲಿರುವ ಬೇರೆ ಸಂಸ್ಥೆಗಳೊಂದಿಗೆ ವಿಲೀನಗೊಳಿಸುವಂತೆ ಶಿಫಾರಸು ಮಾಡಿದೆ.

ADVERTISEMENT

ರೈಲ್ವೆ ಮಂಡಳಿಯ ಆದೇಶದ ಪ್ರಕಾರ, ಐಆರ್‌ಎಸ್‌ಡಿಸಿ ನಿರ್ವಹಿಸುತ್ತಿದ್ದ ಎಲ್ಲ ನಿಲ್ದಾಣಗಳನ್ನು ಈಗ ಆಯಾ ವಲಯದಲ್ಲಿರುವ ರೈಲ್ವೆ ಕಚೇರಿಗಳಿಗೆ ಹಸ್ತಾಂತರಿಸಲಾಗುತ್ತದೆ. ಈ ನಿಲ್ದಾಣಗಳನ್ನು ಮುಂದೆ ಅಭಿವೃದ್ಧಿಪಡಿಸುವುದಕ್ಕಾಗಿ ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆಯಾ ವ್ಯಾಪ್ತಿಯ ವಲಯ ರೈಲ್ವೆ ಕಚೇರಿಗೆ ರವಾನಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.