ADVERTISEMENT

ಇನ್ನು ರೈಲುಗಳಿಗೂ ಬರಲಿದೆ ಬ್ಲ್ಯಾಕ್‌ಬಾಕ್ಸ್‌!

ರೈಲ್ವೆ ಇಲಾಖೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 13:00 IST
Last Updated 15 ಅಕ್ಟೋಬರ್ 2018, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಪಘಾತಗಳ ಕಾರಣ ಪತ್ತೆಗೆ ನೆರವಾಗುವ ಉದ್ದೇಶದಿಂದ ವಿಮಾನಗಳಲ್ಲಿ ಇರುವಂತೆಯೇ ರೈಲುಗಳಲ್ಲಿಯೂ ಬ್ಲ್ಯಾಕ್‌ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಎಂಜಿನ್‌ ಕ್ಯಾಬಿನ್‌ನಲ್ಲಿ ಧ್ವನಿ ಮುದ್ರಿಕೆ (ಎಲ್‌ಸಿವಿಆರ್) ಉಪಕರಣ ಅಭಿವೃದ್ಧಿ ಹಂತದಲ್ಲಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಜಿನ್‌ ಬಳಿ ಅಳವಡಿಸಲಾಗುವ ಈ ಉಪಕರಣ, ಧ್ವನಿ ಮತ್ತು ದೃಶ್ಯ ಮುದ್ರಿಸಲಿದೆ. ರಿಯಲ್ ಟೈಮ್ ಆಧಾರದಲ್ಲಿ ರೈಲು ಸಂಚಾರದ ಹಲವು ಆಯಾಮಗಳ ಮೇಲೂ ಬ್ಲ್ಯಾಕ್‌ಬಾಕ್ಸ್ ನಿಗಾ ವಹಿಸಲಿದೆ. ಎಂಜಿನ್ ಸಹಜವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಈ ಕುರಿತು ಚಾಲಕರಿಗೆ ಎಚ್ಚರಿಕೆ ನೀಡಲಿದೆ. ವೈರ್‌, ಕೇಬಲ್‌ಗಳು, ಕನೆಕ್ಟರ್‌ಗಳ ತಾಪಮಾನದ ಮೇಲೂ ಕಣ್ಣಿಡಲಿದೆ.

ADVERTISEMENT

ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ರೀತಿ, ಎಂಜಿನ್ ನಿರ್ವಹಣೆಯಲ್ಲಿನ ಸಮಸ್ಯೆ, ಮನುಷ್ಯರು ಎಸಗುವ ತಪ್ಪುಗಳನ್ನು ಸಹ ಇದು ಗುರುತಿಸಲಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.