ನವದೆಹಲಿ: ದೂರ ಪ್ರಯಾಣದ ರೈಲುಗಳ ಸೀಟು ಕಾಯ್ದಿರಿಸಿದ ವಿವರಗಳ ಪಟ್ಟಿಯನ್ನು ರೈಲು ಹೊರಡುವ ಎಂಟು ಗಂಟೆಗೂ ಮುನ್ನ ಸಿದ್ಧಪಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈಗ ಇರುವ ವ್ಯವಸ್ಥೆಯ ಪ್ರಕಾರ ಪಟ್ಟಿಯನ್ನು ನಾಲ್ಕು ಗಂಟೆಗಳಿರುವಾಗ ಸಿದ್ಧಪಡಿಸಲಾಗುತ್ತದೆ.
ದೂರದ ಊರುಗಳಿಂದ ಪ್ರಯಾಣಿಸುವವರಿಗೆ ತಮ್ಮ ಪ್ರಯಾಣವನ್ನು ಇನ್ನಷ್ಟು ಉತ್ತಮವಾಗಿ ಯೋಜಿಸಲು ಅನುವು ಮಾಡಿಕೊಡಲು ಈ ತೀರ್ಮಾನ ತೆಗೆದುಕೊಂಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನ 2 ಗಂಟೆಗೂ ಮುನ್ನ ಹೊರಡುವ ರೈಲುಗಳ ಸೀಟು ಕಾಯ್ದಿರಿಸಿದ ವಿವರಗಳ ಪಟ್ಟಿಯನ್ನು ಹಿಂದಿನ ರಾತ್ರಿ 9 ಗಂಟೆಗೆ ಸಿದ್ಧಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ರೈಲುಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಹಂತ ಹಂತವಾಗಿ ಈ ಬದಲಾವಣೆಯನ್ನು ಜಾರಿಗೆ ತರಲು ಸಚಿವರು ಸೂಚಿಸಿದ್ದಾರೆ ಎಂದು ಹೇಳಿದೆ.
ಆಧಾರ್ ದೃಢೀಕರಿಸಿದ ಬಳಕೆದಾರರು ಮಾತ್ರ ತತ್ಕಾಲ್ ಯೋಜನೆಯಡಿ ಟಿಕೆಟ್ ಕಾಯ್ದಿರಿಸಬಹುದಾದ ವ್ಯವಸ್ಥೆಯೂ ಮಂಗಳವಾರದಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.