ADVERTISEMENT

ಮಿಡತೆ ಭೀತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು: ರಾಜಸ್ಥಾನ ಕೃಷಿ ಸಚಿವ

ಏಜೆನ್ಸೀಸ್
Published 11 ಜುಲೈ 2020, 2:24 IST
Last Updated 11 ಜುಲೈ 2020, 2:24 IST
   

ಜೈಪುರ: ರೈತರ ಹಿತದೃಷ್ಟಿಯಿಂದ ಮಿಡತೆ ಭೀತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆರಾಜಸ್ಥಾನ ಕೃಷಿ ಸಚಿವ ಲಾಲ್‌ಚಂದ್‌ ಕಟಾರಿಯಾ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಕಟಾರಿಯಾ, ಕೇಂದ್ರ ಪ್ರಾಯೋಜಿತ ಯೋಜನೆಗಳ ಮೊದಲ ಕಂತಿನ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದೂಬೇಡಿಕೆ ಇಟ್ಟಿದ್ದಾರೆ.

ಮಿಡತೆ ಹಾವಳಿಯಿಂದಾಗಿ ಬೆಳೆನಾಶವಾಗಿರುವುದರ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ವರ್ಷದ ಮುಂಗಾರು ಪೂರ್ವ ಬೆಳೆ ಹಾನಿಗೆ ಕೃಷಿ ವಿಮೆ ಕಂಪೆನಿಗಳು ಸಾಧ್ಯವಾದಷ್ಟು ಬೇಗ ₹ 380 ಕೋಟಿ ಮೊತ್ತದ ಪರಿಹಾರ ಒದಗಿಸಬೇಕು ಎಂದಿದ್ದಾರೆ. ಮುಂದುವರಿದು, 2020-21ನೇ ಸಾಲಿನ ಕೇಂದ್ರ ಯೋಜನೆಗಳ ಮೊದಲ ಕಂತಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ರೈತರ ಹಿತದೃಷ್ಟಿಯಿಂದ ಎಲ್ಲ ಯೋಜನೆಗಳ ಮೊದಲ ಕಂತನ್ನು ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ ಬಿಡುಗಡೆ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ.

ADVERTISEMENT

ರಾಜಸ್ಥಾನದ ನಾಗೌರ್ ಸಂಸದ ಹಾಗೂರಾಷ್ಟ್ರೀಯ ಲೋಕನಾಯಕ ಪಕ್ಷದ (ಆರ್‌ಎಲ್‌ಪಿ) ನಾಯಕ ಹನುಮಾನ್‌ ಬೆನಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಿಡತೆ ದಾಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮತ್ತು ರೈತರಿಗೆ ಕೂಡಲೇ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.