ಜೈಪುರ: ರಾಜಸ್ಥಾನದಲ್ಲಿ ಬಜೆಟ್ ಮಂಡನೆಯ ನಂತರ ಎಲ್ಲ ಪಕ್ಷದ ಶಾಸಕರಿಗೂ ಐಫೋನ್–13 ಅನ್ನು ಉಡುಗೊರೆಯಾಗಿ ನೀಡಲಾಗಿದೆ.
ಸರ್ಕಾರದ ಈ ನಡೆಯನ್ನು ಬಿಜೆಪಿ ಶಾಸಕರು ಟೀಕಿಸಿದ್ದಾರೆ.
‘ನಮ್ಮೆಲ್ಲರ ಬಳಿ ಫೋನ್ಗಳಿವೆ. ಹೀಗೆ ಫೋನ್ ಅನ್ನು ಉಡುಗೊರೆಯಾಗಿ ಕೊಟ್ಟರೆ, ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಲಿದೆ. ಬಿಜೆಪಿ ಶಾಸಕರೆಲ್ಲರೂ ಫೋನ್ಗಳನ್ನು ಹಿಂದಿರುಗಿಸುತ್ತಿದ್ದೇವೆ. ಈ ಬಗ್ಗೆ ಎಲ್ಲರೊಂದಿಗೆ ಮಾತನಾಡಲಾಗುವುದು. ಬಜೆಟ್ನಲ್ಲಿ ಸಾಮಾನ್ಯವಾಗಿ, ಬ್ಯಾಗ್ ಅಥವಾ ಬ್ರೀಫ್ಕೇಸ್ಗಳನ್ನು ಕೊಡಲಾಗುತ್ತದೆ. ಫೋನ್ ಕೊಡುವುದು ಬೇಕಿರಲಿಲ್ಲ’ ಎಂದು ಬಿಜೆಪಿ ಗುಲಾಬ್ ಕಟಾರಿಯಾ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ 200 ಸದಸ್ಯರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.