ADVERTISEMENT

ರಾಜಸ್ಥಾನದ ಮಂಡಳಿ, ನಿಗಮಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಯೋಜನೆ: ಗೆಹಲೋತ್

ಪಿಟಿಐ
Published 10 ಫೆಬ್ರುವರಿ 2023, 9:29 IST
Last Updated 10 ಫೆಬ್ರುವರಿ 2023, 9:29 IST
ಬಜೆಟ್ ಬ್ರೀಫ್ಕೇಸ್ ಜೊತೆ ಅಶೋಕ್ ಗೆಹಲೋತ್: ಪಿಟಿಐ ಚಿತ್ರ
ಬಜೆಟ್ ಬ್ರೀಫ್ಕೇಸ್ ಜೊತೆ ಅಶೋಕ್ ಗೆಹಲೋತ್: ಪಿಟಿಐ ಚಿತ್ರ   

ಜೈಪುರ: ರಾಜಸ್ಥಾನದ ವಿವಿಧ ಮಂಡಳಿಗಳು ಮತ್ತು ನಿಗಮಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಯೋಜನೆಯಡಿ(ಒಪಿಎಸ್) ಸೌಲಭ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಶುಕ್ರವಾರ ಘೋಷಿಸಿದ್ದಾರೆ.

ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಮಾಡುವುದಾಗಿ ಕಳೆದ ವರ್ಷದ ಬಜೆಟ್‌ನಲ್ಲಿ ಗೆಹಲೋತ್ ಘೋಷಿಸಿದ್ದರು. ಇದೀಗ, ಮಂಡಳಿ ಮತ್ತು ನಿಗಮಗಳ ಸಿಬ್ಬಂದಿಗೂ ವಿಸ್ತರಿಸಿದ್ದಾರೆ.

ರಾಜಸ್ಥಾನದ ವಿಧಾನಸಭೆಯಲ್ಲಿ ಶುಕ್ರವಾರ 2023–24ನೇ ಸಾಲಿನ ಬಜೆಟ್ ಮಂಡಿಸಿದ ಗೆಹಲೋತ್, ನಿಗಮ, ಅಕಾಡೆಮಿಗಳು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಪದ್ಧತಿಯ ಪ್ರಯೋಜನಗಳನ್ನು ನೀಡುವುದಾಗಿ ಘೋಷಿಸಿದರು.

ADVERTISEMENT

ಒಪಿಎಸ್ ವಿಸ್ತರಣೆಯಿಂದ 1 ಲಕ್ಷಕ್ಕೂ ಅಧಿಕ ನೌಕರರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.