ADVERTISEMENT

ರಾಜಸ್ಥಾನ: 55 ಗಂಟೆಗಳ ಕಾರ್ಯಾಚರಣೆ ಬಳಿಕವೂ ಬದುಕುಳಿಯದ ಕೊಳವೆ ಬಾವಿಗೆ ಬಿದ್ದ ಮಗು

ಪಿಟಿಐ
Published 12 ಡಿಸೆಂಬರ್ 2024, 3:02 IST
Last Updated 12 ಡಿಸೆಂಬರ್ 2024, 3:02 IST
<div class="paragraphs"><p>55 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ</p></div>

55 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ

   

ಜೈಪುರ: ರಾಜಸ್ಥಾನದ ದೌಸಾದಲ್ಲಿ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಐದು ವರ್ಷದ ಮಗು ಮೃತಪಟ್ಟಿದೆ. ಮಗುವನ್ನು ರಕ್ಷಿಸಲು 55 ಗಂಟೆಗಳ ಕಾರ್ಯಾಚರಣೆಯ ಕೈಗೊಳ್ಳಲಾಗಿತ್ತು. ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಮಗು ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಯನ್‌ ಎನ್ನುವ ಮಗು ಸೋಮವಾರ ಆಟವಾಡುತ್ತಿರುವಾಗ ಕೊಳವೆ ಬಾವಿಗೆ ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಾಗಿತ್ತು.

ADVERTISEMENT

ಕಾರ್ಯಾಚರಣೆಯ ಸಮಯದಲ್ಲಿ ಮಗುವಿನ ಹತ್ತಿರ ತಲುಪಲು ಕೊಳವೆ ಬಾವಿಗೆ ಸಮಾನಾಂತರವಾಗಿ ಅಗೆಯಲಾಗಿತ್ತು. ಆದರೆ ಪ್ರದೇಶದಲ್ಲಿ 160 ಅಡಿ ಆಳದಲ್ಲಿ ನೀರು ಇದ್ದ ಕಾರಣ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.