ADVERTISEMENT

ರಾಜಸ್ಥಾನ: ಸರ್ಕಾರಿ ವೈದ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಅಸ್ತು

ಪಿಟಿಐ
Published 9 ನವೆಂಬರ್ 2023, 11:07 IST
Last Updated 9 ನವೆಂಬರ್ 2023, 11:07 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ವೈದ್ಯಾಧಿಕಾರಿಯೊಬ್ಬರಿಗೆ ಅವಕಾಶ ನೀಡಿರುವ ರಾಜಸ್ಥಾನ ಹೈಕೋರ್ಟ್‌, ಒಂದುವೇಳೆ ಅಧಿಕಾರಿ ಸೋತರೆ ಕರ್ತವ್ಯಕ್ಕೆ ಮರಳಲು ಕೂಡಾ ಅನುವು ಮಾಡಿಕೊಟ್ಟಿದೆ.

ವೈದ್ಯ ದೀಪಕ್‌ ಘೋಘ್ರಾ (43) ಅವರು ಭಾರತೀಯ ಟ್ರೈಬಲ್ ಪಕ್ಷದ (ಬಿಟಿಪಿ) ಅಭ್ಯರ್ಥಿಯಾಗಿ ಡುಂಗರ್‌ಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಅವರು ಬಿಟಿಪಿ ರಾಜ್ಯ ಅಧ್ಯಕ್ಷ ವೆಲಾರಾಮ್‌ ಘೋಘ್ರಾ ಅವರ ಮಗ. 

ADVERTISEMENT

ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ವೈದ್ಯಾಧಿಕಾರಿ ದೀಪಕ್‌ ಅವರಿಗೆ ಕರ್ತವ್ಯದಿಂದ ಬಿಡುವು ನೀಡಬೇಕು. ಅಧಿಕಾರಿಯು ಚುನಾವಣೆಯಲ್ಲಿ ಸೋತರೆ ಅವರನ್ನು ಕರ್ತವ್ಯಕ್ಕೆ ಪುನಃ ಸೇರಿಸಿಕೊಳ್ಳಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚಿಸಿದೆ. 

ಸರ್ಕಾರಿ ವೈದ್ಯರೊಬ್ಬರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಅವಕಾಶ ನೀಡಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ದೀಪಕ್ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.