ADVERTISEMENT

ರಾಜಸ್ಥಾನ ರಾಜಕೀಯ: ಹೈಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಿದ ಬಿಜೆಪಿ ಶಾಸಕ

ಬಿಎಸ್‌ಪಿಯ ಆರು ಶಾಸಕರು ಕಾಂಗ್ರೆಸ್‌ ಸೇರ್ಪಡೆ ಪ್ರಕರಣ

ಪಿಟಿಐ
Published 28 ಜುಲೈ 2020, 10:08 IST
Last Updated 28 ಜುಲೈ 2020, 10:08 IST
ಮದನ್‌ ದಿಲಾವರ್‌
ಮದನ್‌ ದಿಲಾವರ್‌   

ಜೈಪುರ: ಬಿಎಸ್‌ಪಿಯ ಆರು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿರುವುದನ್ನು ಪ್ರಶ್ನಿಸಿ ನೀಡಿದ್ದ ದೂರನ್ನು ತಿರಸ್ಕರಿಸಿರುವರಾಜಸ್ಥಾನ ವಿಧಾನಸಭೆಯ ಸ್ಪೀಕರ್‌ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಮದನ್‌ ದಿಲಾವರ್‌ರಾಜಸ್ಥಾನ ಹೈಕೋರ್ಟ್‌ನಲ್ಲಿ ಮಂಗಳವಾರ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆಯೂ ದಿಲಾವರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಭಾಧ್ಯಕ್ಷರು ದೂರಿನ ಕುರಿತು ಆದೇಶ ಹೊರಡಿಸಿದ್ದಾರೆ ಎಂಬ ಕಾರಣ ನೀಡಿ, ನ್ಯಾಯಾಲಯವು ಸೋಮವಾರ ಅರ್ಜಿ ವಜಾಗೊಳಿಸಿತ್ತು.

ಮಾರ್ಚ್‌ ತಿಂಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿಪಕ್ಷಾಂತರ ಮಾಡಿರುವ ಬಿಎಸ್‌ಪಿಯ ಆರು ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿತ್ತು. ಆದರೆ ಸ್ಪೀಕರ್‌ ಅವರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆರೋ‍ಪಿಸಲಾಗಿದೆ.

ADVERTISEMENT

ಜುಲೈ 24 ರಂದು ಸ್ಪೀಕರ್ ನೀಡಿರುವ ಆದೇಶದ ಸಿಂಧುತ್ವ, ಕಾನೂನುಬದ್ಧತೆ ಮತ್ತು ಆದೇಶ ಸರಿಯಾಗಿದೆಯೇ ಎಂಬುದನ್ನು ದಿಲಾವರ್‌ ಅವರುಹೊಸ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.