ADVERTISEMENT

ಕೃಷಿ ಮಸೂದೆ ಮೇಲೆ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು: ರಾಜ್ಯಸಭಾ ಕಲಾಪ ಮುಂದೂಡಿಕೆ

ಪಿಟಿಐ
Published 2 ಫೆಬ್ರುವರಿ 2021, 10:07 IST
Last Updated 2 ಫೆಬ್ರುವರಿ 2021, 10:07 IST
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಉಪಸಭಾಪತಿ ಪೀಠದ ಮುಂದೆ ಮಂಗಳವಾರ ಪ್ರತಿಭಟಿಸಿದರು  –ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಉಪಸಭಾಪತಿ ಪೀಠದ ಮುಂದೆ ಮಂಗಳವಾರ ಪ್ರತಿಭಟಿಸಿದರು  –ಪಿಟಿಐ ಚಿತ್ರ   

ನವದೆಹಲಿ: ನೂತನ ಕೃಷಿ ಮಸೂದೆಗಳ ಕುರಿತು ಚರ್ಚೆನಡೆಸುವಂತೆ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ದಿನದ ಕಲಾಪ ಆರಂಭಗೊಂಡ ನಂತರ, ಪ್ರತಿಪಕ್ಷಗಳಿಂದ ಗದ್ದಲ ಶುರುವಾದಾಗ ಬೆಳಿಗ್ಗೆ 10.30ರವರೆಗೆ ಮುಂದೂಡಲಾಯಿತು. ನಂತರದಲ್ಲಿ 11.30ರವರೆಗೆ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭಗೊಂಡರೂ, ವಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ಸದನವನ್ನು ಮತ್ತೆ ಮಧ್ಯಾಹ್ನ 12.30 ರವರೆಗೆ ಮುಂದೂಡಲಾಯಿತು.

ಮಧ್ಯಾಹ್ನ 12.30ಕ್ಕೆ ಸದನದ‌ ಕಲಾಪ ಪುನಃ ಆರಂಭಗೊಂಡಿತು. ಆಗ, ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಉಪಸಭಾ‍ಪತಿ ಹರಿವಂಶ್‌ ಅವರ ಪೀಠದ ಮುಂದೆ ಸೇರಿದರು. ಆಗ, ಅವರು ದಿನದ ಮಟ್ಟಿಗೆ ಸದನವನ್ನು ಮುಂದೂಡಿ ರೂಲಿಂಗ್‌ ನೀಡಿದರು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.