ADVERTISEMENT

ಸೋರೊಸ್, ಅದಾನಿ ಪ್ರಕರಣ: ರಾಜ್ಯಸಭೆ ಕಲಾಪ ಮತ್ತೆ ಮುಂದೂಡಿಕೆ

ಪಿಟಿಐ
Published 10 ಡಿಸೆಂಬರ್ 2024, 9:47 IST
Last Updated 10 ಡಿಸೆಂಬರ್ 2024, 9:47 IST
<div class="paragraphs"><p>ರಾಜ್ಯಸಭೆಯಲ್ಲಿ ಗದ್ದಲ</p></div>

ರಾಜ್ಯಸಭೆಯಲ್ಲಿ ಗದ್ದಲ

   

(ಪಿಟಿಐ ಚಿತ್ರ)

ನವದೆಹಲಿ: ಸೋರೊಸ್ ಮತ್ತು ಉದ್ಯಮಿ ಗೌತಮ್ ಅದಾನಿ ಹಗರಣದ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ಸಂಸದರ ನಡುವೆ ಗದ್ದಲ ಉಂಟಾದ ಪರಿಣಾಮ ರಾಜ್ಯಸಭೆ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.

ADVERTISEMENT

ಇಂದು (ಮಂಗಳವಾರ) ಅಪರಾಹ್ನ 12 ಗಂಟೆಗೆ ಸದನ ಸೇರಿದಾಗ, ಕಾಂಗ್ರೆಸ್ ಮತ್ತು ಜಾರ್ಜ್ ಸೋರೊಸ್ ನಡುವಣ ನಂಟಿನ ಕುರಿತು ಪ್ರಸ್ತಾಪಿಸಿದ ಬಿಜೆಪಿ ನಾಯಕ ಜೆ.ಪಿ.ನಡ್ಡಾ, ದೇಶವನ್ನು ಅಸ್ಥಿರಗೊಳಿಸಲು ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸದನದಲ್ಲಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ನಡ್ಡಾ, ದೇಶವನ್ನು ಅಸ್ಥಿರಗೊಳಿಸಲು ಸೋರೊಸ್ ಅನುದಾನಿತ ಸಂಸ್ಥೆಯ ಪಾತ್ರದ ಕುರಿತು ಪ್ರಶ್ನೆ ಎತ್ತಿದರು.

ಇದು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು.

ಈ ವಿಷಯವನ್ನು ನಡ್ಡಾ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದ ಸಂಸದರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಉತ್ತರ ನೀಡುವಂತೆ ಒತ್ತಾಯಿಸಿದವು.

ಇದಾರ ನಂತರ ₹23,000 ಕೋಟಿ ಲಂಚ ನೀಡಿರುವ ಅದಾನಿ ವಿಷಯವನ್ನು ಪ್ರಸ್ತಾಪಿಸಿದ ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ಉಪನಾಯಕ ಪ್ರಮೋದ್ ತಿವಾರಿ, ಚರ್ಚೆಗೆ ಪಟ್ಟು ಹಿಡಿದರು.

ಎರಡೂ ಕಡೆಯಿಂದ ಗದ್ದಲ ಉಂಟಾದ ಪರಿಣಾಮ ಸಭಾಪತಿ ಸದನವನ್ನು ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.