ADVERTISEMENT

Rajya Sabha Election:10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ; ವೇಳಾಪಟ್ಟಿ ಪ್ರಕಟ

ಪಿಟಿಐ
Published 18 ಫೆಬ್ರುವರಿ 2026, 6:23 IST
Last Updated 18 ಫೆಬ್ರುವರಿ 2026, 6:23 IST
   

ನವದೆಹಲಿ: ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ 2026ರ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಈ 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

2026 ಮಾರ್ಚ್ 16ರಂದು ಬೆಳಿಗ್ಗೆ 9:00 ರಿಂದ ಸಂಜೆ 4:00ರವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಅದೇ ದಿನ ಸಂಜೆ 5:00 ಗಂಟೆಗೆ ನಿಗದಿಯಾಗಿದೆ.

ADVERTISEMENT

10 ರಾಜ್ಯಗಳಿಂದ ಆಯ್ಕೆಯಾದ ಪರಿಷತ್‌ನ 37 ಸದಸ್ಯರ ಅಧಿಕಾರಾವಧಿ 2026ರ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಈ ಚುನಾವಣೆ ನಡೆಯಲಿದೆ.

ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಹಾಗೂ ಪ್ರಕ್ರಿಯೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದೂ ಆಯೋಗ ಹೇಳಿದೆ.

ವೇಳಾಪಟ್ಟಿ
  • ಚುನಾವಣೆ ಅಧಿಸೂಚನೆ: 2026 ಫೆಬ್ರುವರಿ 26

  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: 05 ಮಾರ್ಚ್ 2026

  • ನಾಮಪತ್ರಗಳ ಪರಿಶೀಲನೆ: 06 ಮಾರ್ಚ್ 2026

  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 09 ಮಾರ್ಚ್ 2026

  • ಮತದಾನದ ದಿನಾಂಕ: 16 ಮಾರ್ಚ್ 2026

  • ಮತದಾನದ ಸಮಯ ಬೆಳಿಗ್ಗೆ: 09 ರಿಂದ ಸಂಜೆ 04ರವರೆಗೆ

  • ಮತ ಎಣಿಕೆ ದಿನಾಂಕ, ಸಮಯ: 16 ಮಾರ್ಚ್, 2026 ಸಂಜೆ 5 ಗಂಟೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.