ADVERTISEMENT

ಸಮವಸ್ತ್ರಕ್ಕೆ ಆಕ್ಷೇಪ: ಮಿಲಿಟರಿ ಶೈಲಿ ಟೋಪಿ ಕೈ ಬಿಟ್ಟ ರಾಜ್ಯಸಭಾ ಮಾರ್ಷಲ್‌ಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 9:17 IST
Last Updated 21 ನವೆಂಬರ್ 2019, 9:17 IST
ಟಿವಿ ದೃಶ್ಯಾವಳಿ
ಟಿವಿ ದೃಶ್ಯಾವಳಿ    

ನವದೆಹಲಿ: ರಾಜ್ಯಸಭೆಯ ಮಾರ್ಷಲ್‌ಗಳಿಗೆ ಮಿಲಿಟರಿ ಶೈಲಿಯ ಸಮವಸ್ತ್ರ ಮತ್ತು ಟೋಪಿ ನೀಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದರು.

ಮಾರ್ಷಲ್‌ಗಳ ಸಮವಸ್ತ್ರ ಬಗ್ಗೆ ಆಕ್ಷೇಪ ಕೇಳಿ ಬಂದಿದ್ದರಿಂದ ಟೋಪಿ ಧರಿಸುವುದನ್ನುನಿಲ್ಲಿಸಲಾಗಿದೆ. ಗುರುವಾರ ಮಾರ್ಷಲ್‌ಗಳು ಟೋಪಿ ಧರಿಸದೆ ಸದನಕ್ಕೆ ಬಂದಿದ್ದರು.ಮಾರ್ಷಲ್‌ಗಳು ಟೋಪಿ ಇಲ್ಲದೆ ಬಂದಿರುವುದನ್ನು ರಾಜ್ಯಸಭಾ ಸದಸ್ಯರೊಬ್ಬರು ಎಲ್ಲರ ಗಮಕ್ಕೆ ತಂದರು.

ADVERTISEMENT

ಸೋಮವಾರದಿಂದ ಆರಂಭವಾದ ಕಲಾಪದಲ್ಲಿ ಸಾಂಪ್ರದಾಯಿಕ ದಿರಿಸಿನ ಬದಲಾಗಿ ಮಾರ್ಷಲ್‌ಗಳು ತಿಳಿನೀಲಿ ಬಣ್ಣದ ಸಮವಸ್ತ್ರ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.