ADVERTISEMENT

ರಾಜ್ಯಸಭೆ: ಕಮಲ್ ಹಾಸನ್ ಸೇರಿ 6 ಮಂದಿ ಅವಿರೋಧ ಆಯ್ಕೆ ಸಾಧ್ಯತೆ

ಪಿಟಿಐ
Published 10 ಜೂನ್ 2025, 15:42 IST
Last Updated 10 ಜೂನ್ 2025, 15:42 IST
<div class="paragraphs"><p>ಕಮಲ್ ಹಾಸನ್</p></div>

ಕಮಲ್ ಹಾಸನ್

   

ಚೆನ್ನೈ: ಎಂಎನ್ಎಂ ಮುಖ್ಯಸ್ಥ, ನಟ ಕಮಲ್ ಹಾಸನ್ ಸೇರಿದಂತೆ ತಮಿಳುನಾಡಿನ 6 ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಆಡಳಿತಾರೂಢ ಡಿಎಂಕೆಯ ಮೂವರು, ವಿರೋಧ ಪಕ್ಷ ಎಐಎಡಿಎಂಕೆಯ ಇಬ್ಬರು ಹಾಗೂ ಕಮಲ್‌ ಹಾಸನ್‌ ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ವಿಧಾನಸಭೆಯ ಹೆಚ್ಚುವರಿ ಕಾರ್ಯದರ್ಶಿ ಕಚೇರಿ ಮಂಗಳವಾರ ದೃಢಪಡಿಸಿ, ಅವುಗಳನ್ನು ಅಂಗೀಕರಿಸಿದೆ.

ಇದೇ ವೇಳೆ 7 ಮಂದಿ ಸ್ವತಂತ್ರ್ಯ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಕಮಲ್‌ ಹಾಗೂ ಇತರೆ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಬಹುದು ಎನ್ನಲಾಗಿದೆ. ರಾಜ್ಯಸಭೆಯಲ್ಲಿ ತಮಿಳುನಾಡಿನ 6 ಹಾಲಿ ಸಂಸದರ ಅವಧಿ ಜುಲೈ 24ಕ್ಕೆ ಮುಕ್ತಾಯಗೊಳ್ಳಲಿದೆ. ಆ ಸ್ಥಾನಗಳಿಗೆ ಜೂನ್‌ 19ರಂದು ಚುನಾವಣೆ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.